ನ್ಯೂಸ್ ನಾಟೌಟ್ : ಅನೇಕ ಮದುವೆಗಳು ಹಲವು ಬಾರಿ ವಿಚಿತ್ರ ವಿಷಯಗಳಿಗಾಗಿ ಸುದ್ದಿಗಳಾಗಿ ವೈರಲ್ ಆಗುತ್ತವೆ, ಅಂತಹದ್ದೇ ಘಟನೆ ಮಧ್ಯಪ್ರದೇಶದ ಮದುವೆಯಲ್ಲೂ ನಡೆದಿದೆ. ಮದುವೆ ಕಾರ್ಯಕ್ರಮದಲ್ಲಿ ಜೋರಾಗಿ ಇಡಲಾದ ಡಿ.ಜೆ ಹಾಡುಗಳನ್ನು ಪೊಲೀಸರು ನಿಲ್ಲಿಸಿದ ಕಾರಣಕ್ಕೆ ವಧು – ವರರು ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆಗೆ ಕುಳಿತ ಘಟನೆ ಈಗ ಎಲ್ಲೆಡೆ ವೈರಲ್ ಆಗುತ್ತದೆ.
ಈ ಘಟನೆ ಕಳೆದ ಗುರುವಾರ ಮಧ್ಯರಾತ್ರಿ ನಡೆದಿದ್ದು, ಜೋರಾಗಿ ಡಿಜೆ ಮೂಲಕ ಸಿನಿಮಾ ಗೀತೆಗಳನ್ನು ಹಾಕಿದ್ದಕ್ಕೆ ಪೊಲೀಸರು ಬಂದು ಇದು ಕಾನೂನು ಬಾಹಿರ ಎಂದು ಹಾಡು ನಿಲ್ಲಿಸಿದ್ದಾರೆ. ಆದರೆ, ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಡಿಜೆ ಯನ್ನು ನಿಲ್ಲಿಸಲು ಬಂದ ಪೊಲೀಸರು ಮದುಮಗನ ಕುಟುಂಬದ ಹೆಂಗಸೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ, ಹಾಗಾಗಿ ಆತನನ್ನು ಅಮಾನತುಗೊಳಿಸಬೇಕೆಂದು ಪಟ್ಟುಹಿಡಿದು ದಂಪತಿ ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದಾರೆ.
ಈ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಆರೋಪಿ ಪೊಲೀಸ್ ಗೆ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಆ ಬಳಿಕ ಜೋಡಿ ಹಿಂದುರಿಗಿದ್ದಾರೆ ಎಂದಿದ್ದಾರೆ.