ಮರ್ಯಾದಾ ಹತ್ಯೆಯ ಶಂಕಿತ ಪ್ರಕರಣದಲ್ಲಿ ಬಿಹಾರದ ಹಾಜಿಪುರದಲ್ಲಿ ದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ 18 ಹಾಗೂ 16 ವರ್ಷದ ಇಬ್ಬರು ಹೆಣ್ಣು ಮಕ್ಕಳನ್ನು ಕೊಂದಿದ್ದಾರೆ ಎಂದು ಪೊಲೀಸ್ ಮೂಲಗಳು ಭಾನುವಾರ ತಿಳಿಸಿವೆ.
ಮಲಗಿದ್ದಾಗ ಹೆಣ್ಣು ಮಕ್ಕಳನ್ನು ಕೊಂದಿರುವುದಾಗಿ ತಾಯಿ ಒಪ್ಪಿಕೊಂಡಿದ್ದು, ಘಟನಾ ಸ್ಥಳಕ್ಕೆ ಬಂದಾಗ ಎರಡು ಶವಗಳ ಬಳಿ ತಾಯಿ ರಿಂಕು ದೇವಿ ಕುಳಿತಿರುವುದು ಕಂಡುಬಂದಿತ್ತು. ಆ ನಂತರ ಪರಾರಿಯಾಗಿರುವ ರಿಂಕು ದೇವಿ ಪತಿ ನರೇಶ್ ಬೈತಾಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಪೊಲೀಸರು ತಾಯಿಯನ್ನು ವಿಚಾರಿಸಿದಾಗ ಇಬ್ಬರೂ ಹುಡುಗಿಯರು ಬೇರೆ ಬೇರೆ ಜಾತಿಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಪಾಲಕರಿಗೆ ತಿಳಿಸದೆ ಮನೆ ಬಿಟ್ಟು ಹೋಗಲು ಯತ್ನಿಸುತ್ತಿದ್ದ ಬಾಲಕಿಯರನ್ನು ನಾವು ಕೊಂದಿದ್ದೇವೆ ಎಂದು ರಿಂಕು ದೇವಿ ಹೇಳಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ತಂದೆ-ತಾಯಿ ಇಬ್ಬರೂ ಕೊಲೆಯಲ್ಲಿ ಭಾಗಿಯಾಗಿರುವುದು ಸಾಭೀತಾಗಿದೆ.
“ಹುಡುಗಿಯರನ್ನು ತಂದೆಯೇ ಕೊಲೆ ಮಾಡಿದ್ದಾರೆ ಎಂದು ತಾಯಿ ಆರಂಭದಲ್ಲಿ ಹೇಳಿದ್ದರು. ಆದರೆ ತನಿಖೆಯ ನಂತರ, ಪೋಷಕರು ಇಬ್ಬರೂ ಸೇರಿ ಹುಡುಗಿಯರನ್ನು ಕೊಂದಿದ್ದಾರೆ ಎಂದು ನಮಗೆ ತಿಳಿಯಿತು” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಓಂ ಪ್ರಕಾಶ್ ತಿಳಿಸಿದ್ದಾರೆ.