ನ್ಯೂಸ್ ನಾಟೌಟ್: ಅಜ್ಜಿ ಮನೆಗೆ ಬಂದಿದ್ದ ಬಾಲಕ ಶವವಾಗಿ ಪತ್ತೆಯಾಗಿದ ಘಟನೆ ಹುಬ್ಬಳ್ಳಿ ಶ್ರೀನಗರದಲ್ಲಿ ಎಪ್ರಿಲ್ ೧ ರಂದು ನಡೆದಿದೆ. ಈ ಘಟನೆ ನಡೆದ 48 ಗಂಟೆಗಳಲ್ಲಿ ಆರೋಪಿಯನ್ನು ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ಘಟನಾ ಸ್ಥಳಕ್ಕೆ ಡಿಸಿಪಿ ರಾಜೀವ್ ಎಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೆ, ಶೀಘ್ರ ಆರೋಪಿಯನ್ನು ಬಂಧನ ಮಾಡುವುದಾಗಿ ತಿಳಿಸಿದ್ದರು. ಬಾಲಕ ನಾಪತ್ತೆಯಾಗಿದ್ದ ಬಗ್ಗೆ ಪೋಷಕರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಸಹ ದಾಖಲು ಮಾಡಿದ್ದರು ಎಂದು ವರದಿ ತಿಳಿಸಿದೆ.
ಬೇಸಿಗೆ ರಜೆ ಇದ್ದ ಕಾರಣ ಬಾಲಕ ಅಜ್ಜಿಯ ಮನೆಯಲ್ಲಿ ಕೆಲ ದಿನಗಳನ್ನು ಕಳೆಯಲು ಹುಬ್ಬಳಿಯ ಶ್ರೀನಗರದ ಅಜ್ಜಿ ನಿವಾಸಕ್ಕೆ ಬಂದಿದ್ದ. ಮೃತ ಬಾಲಕ ಹಾಗೂ ಆರೋಪಿ ರವಿ ಇಬ್ಬರಿಗೂ ಪರಿಚಯವಿತ್ತು. ಇದೇ ಕಾರಣಕ್ಕೆ ಬಾಲಕ ಆರೋಪಿ ಬಳಿ ಐದು ರೂಪಾಯಿ ಹಣ ಕೇಳಿದ್ದನಂತೆ.
ಇದರಂತೆ ಆರೋಪಿ ಕೂಡ ಮೊದಲು ಐದು ರೂಪಾಯಿಯನ್ನು ಬಾಲಕನಿಗೆ ನೀಡಿದ್ದಾನೆ. ಆದರೆ ಮತ್ತೆ ಬಾಲಕ ನದೀಂ ಐದು ರೂಪಾಯಿ ನೀಡುವಂತೆ ಕೇಳಿದ್ದನಂತೆ. ಇದರಿಂದ ಕೋಪಗೊಂಡ ರವಿ, ಬಾಲಕ ಕನ್ನೆಗೆ ಬಾರಿಸಿದ್ದಾನೆ, ಆರೋಪಿಯ ಹೊಡೆತದಿಂದ ಬಾಲಕ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ ಹೋಗಿದ್ದಾನೆ ಎಂದು ಮಾಹಿತಿ ದೊರಕಿದೆ.
ಇದರಿಂದ ಆತಂಕಗೊಂಡ ಆರೋಪಿ, ಮಗುವನ್ನು ಪಾಳು ಬಿದ್ದ ಸ್ಥಳವೊಂದಕ್ಕೆ ಎತ್ತಿಕೊಂಡು ಹೋಗಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಆ ಬಳಿಕ ಅನುಮಾನ ಬಾರದಂತೆ ಮಾಡಲು ಮಗುವಿನ ಬಟ್ಟೆಗಳನ್ನು ಬಿಚ್ಚಿ, ಸ್ಥಳದಿಂದ ಎಸ್ಕೇಫ್ ಆಗಿದ್ದನಂತೆ. ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿ ರವಿ ಬಳ್ಳಾರಿ ಐದು ರೂಪಾಯಿಗಾಗಿ ಕೊಲೆ ಮಾಡಿರುವುದಾಗಿ ಒಪ್ಪೊಕೊಂಡಿದ್ದಾನೆ. 8 ವರ್ಷದ ಬಾಲಕನ ಈ ಕೊಲೆ ಪ್ರಕರಣ ಹುಬ್ಬಳ್ಳಿ ಶ್ರೀನಗರದ ಜನರು ಬೆಚ್ಚಿ ಬೀಳುವಂತೆ ಮಾಡಿದೆ.