ನ್ಯೂಸ್ ನಾಟೌಟ್ : ಮಹಿಳೆಯೊಬ್ಬರು ಕುಡಿದ ಮತ್ತಿನಲ್ಲಿ ವೇಟರ್ಗಳನ್ನು ನಿಂದಿಸಿದ ನಂತರ ರೆಸ್ಟೋರೆಂಟ್ನಲ್ಲಿ ಇತರ ಗ್ರಾಹಕರ ಭಕ್ಷ್ಯಗಳಿಗೆ ನೀರು ಸುರಿದು ರಂಪಾಟ ಎಬ್ಬಿಸಿದ ಘಟನೆ ಪುಣೆಯಲ್ಲಿ ನಡೆದಿದೆ.
ಪೊಲೀಸರು ರೆಸ್ಟೋರೆಂಟ್ಗೆ ಬಂದ ನಂತರ, ಆಕೆ ಪೊಲೀಸರನ್ನೂ ನಿಂದಿಸಿ ಮಹಿಳಾ ಪೊಲೀಸ್ ಹೆಬ್ಬೆರಳು ತಿರುಚಿ ಕಚ್ಚಿದ್ದಾಳೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಮಹಿಳೆಯೊಬ್ಬರನ್ನು ಪುಣೆಯ ಮಾರುಕಟ್ಟೆ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
45 ವರ್ಷದ ಮಹಿಳೆಯನ್ನು ಬಂಧಿಸಲಾಗಿದ್ದು, ಮಹಿಳಾ ಪೊಲೀಸ್ ನಾಯ್ಕ್ ವನಿತಾ ಮಾನೆ ಅವರು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು (106/23) ದಾಖಲಿಸಿದ್ದಾರೆ. ಶುಕ್ರವಾರ ರಾತ್ರಿ 11 ಗಂಟೆಗೆ ಶ್ರೀ ಸಾಗರ್ ಹೋಟೆಲ್ ಮತ್ತು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಆರೋಪಿ ಮಹಿಳೆ ಊಟ ಮಾಡಲು ಹೋಟೆಲ್ ಶ್ರೀ ಸಾಗರ್ಗೆ ಹೋಗಿದ್ದರು. ತಾನು ಕೇಳಿದ ಊಟ ಬಡಿಸಲಿಲ್ಲವೆಂದು ಕುಡಿದ ಮತ್ತಿನಲ್ಲಿ ಮ್ಯಾನೇಜರ್ ಹಾಗೂ ವೇಟರ್ ಗಳನ್ನು ನಿಂದಿಸಿದ್ದಾಳೆ. ಈ ವೇಳೆ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಮತ್ತು ಆಕೆಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.