ನ್ಯೂಸ್ ನಾಟೌಟ್ : ಮದುವೆ ಅಂದಮೇಲೆ ಅಲ್ಲಿ ಸಂಭ್ರಮ-ಸಡಗರ ಮನೆಮಾಡುತ್ತೆ.ನೆಂಟರಿಷ್ಟರು,ಬಂಧು-ಬಳಗ,ಕುಟುಂಬಸ್ಥರು ಒಟ್ಟು ಸೇರುವ ಜಾಗ.ಅಂತಹ ಮದುವೆ ಸಮಾರಂಭದಲ್ಲಿ ಸಿಲ್ಲಿ ಕಾರಣಕ್ಕೆ ಜಗಳವಾಗಿದೆ.ಹೌದು, ಕೇರಳದಲ್ಲಿ ನಡೆದ ಘಟನೆಯೊಂದರಲ್ಲಿ ವರನ ಸ್ನೇಹಿತ ಹೆಚ್ಚುವರಿ ಹಪ್ಪಳ ಕೇಳಿದ್ದಾನೆ. ಊಟ ಬಡಿಸುವವರು ಅದನ್ನು ಗಮನಿಸಿಲ್ಲ ಇದರಿಂದ ಕೋಪಗೊಂಡ ವರನ ಸ್ನೇಹಿತ ಜೋರು ಗಲಾಟೆ ಮಾಡಿದ್ದಾನೆ.ಇದರಿಂದ ಕೆಲಕಾಲ ವಾಗ್ವಾದವೇ ನಡೆದಿದೆ.
ಗಲಾಟೆಯ ನಂತರ, ಸಮಾರಂಭದಲ್ಲಿ 15 ಅತಿಥಿಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.ಮೊದಲಿಗೆ ಸಿಬ್ಬಂದಿ ಹಾಗೂ ವರನ ಸ್ನೇಹಿತನ ನಡುವೆ ವಾಗ್ವಾದ ನಡೆದಿದೆ. ಆಗ ವರನ ಗೆಳೆಯನ ಕಡೆಯವರು ನೇರವಾಗಿ ಹುಡುಗಿಯ ಮನೆಯವರೊಂದಿಗೆ ವಾಗ್ವಾದ ಆರಂಭಿಸಿದ್ದಾರೆ ಎನ್ನಲಾಗಿದೆ.ಆ ಬಳಿಕ ಮದುವೆ ಮನೆ ರಣರಂಗವಾಗಿದೆ! ಒಂದು ಪಕ್ಷದವರು ಇನ್ನೊಂದು ಪಕ್ಷದವರ ಮೇಲೆ ಶೂಗಳೊಂದಿಗೆ ಒಬ್ಬರ ಮೇಲೊಬ್ಬರು ಕುರ್ಚಿ, ಮೇಜುಗಳನ್ನು ಎಸೆಯತೊಡಗಿದ್ದಾರೆನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿಯಲಾರಂಭಿಸಿದೆ.
ಜಗಳದ ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗಿದ್ದು, ಇದರಲ್ಲಿ ಅತಿಥಿಗಳು ಮದುವೆಮನೆಯಲ್ಲಿ ಹುಚ್ಚುಚ್ಚಾಗಿ ಹೊಡೆದಾಡುವುದನ್ನು ಮತ್ತು ಪಾತ್ರೆಗಳನ್ನು ಪರಸ್ಪರ ಎಸೆದಾಡುವುದನ್ನು ಕಾಣಬಹುದು.ಟ್ವಿಟ್ಟರ್ ಬಳಕೆದಾರಾರದ ರಾಕೇಶ್ ಕೃಷ್ಣನ್ ಸಿಂಹ ಎಂಬ ವ್ಯಕ್ತಿ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ, “100% ಸಾಕ್ಷರತೆ ಹೊಂದಿರುವ ಕೇರಳದಲ್ಲಿ, ವರನ ಸ್ನೇಹಿತ ನನಗೆ ಹಪ್ಪಳ ಬೇಕು ಎಂದು ಗಲಾಟೆ ಮಾಡುವುದು, ಗುದ್ದಾಡುವುದು ಮತ್ತು ಶೂಗಳನ್ನು ಎಸೆಯುವುದು ಸಾಕ್ಷರತೆಯರ ಲಕ್ಷಣವಲ್ಲ.” ಎಂದು ಬರೆದಿದ್ದಾರೆ.30 ಕ್ಕೂ ಹೆಚ್ಚು ಜನರು ಜಗಳವಾಡುತ್ತಿದ್ದರು ಮತ್ತು ವಾಗ್ವಾದವನ್ನು ತಡೆಯಲು ಪೊಲೀಸರನ್ನು ಕರೆಸಲಾಯಿತು. ಪೊಲೀಸರು ಆಗಮಿಸಿದರಿಂದ ಜಗಳವನ್ನು ತಡೆಯಲು ಸಾಧ್ಯವಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.