ನ್ಯೂಸ್ ನಾಟೌಟ್ : ಕಾರ್ಖಾನೆಯೊಂದರಲ್ಲಿ ಅನಿಲ ಸೋರಿಕೆಯಾದ ಘಟನೆ ಪಂಜಾಬ್ನ ಲುಧಿಯಾನಾದ ಗಿಯಾಸ್ಪುರ ಪ್ರದೇಶದಲ್ಲಿನ ನಡೆದಿದೆ. ಈ ದುರಂತದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, 11 ಮಂದಿ ಅಸ್ವಸ್ಥರಾಗಿದ್ದಾರೆ ಎಂದು ವರದಿ ತಿಳಿಸಿದೆ.
ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ವೈದ್ಯರು ಮತ್ತು ಆಂಬ್ಯುಲೆನ್ಸ್ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
“ಇದು ಅನಿಲ ಸೋರಿಕೆ ಪ್ರಕರಣವಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ತಂಡವು ಜನರನ್ನು ಸ್ಥಳಾಂತರಿಸಲು ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ಘಟನೆಯಲ್ಲಿ 9 ಜನರು ಸಾವನ್ನಪ್ಪಿದ್ದಾರೆ ಮತ್ತು 11 ಜನರು ಅಸ್ವಸ್ಥರಾಗಿದ್ದಾರೆ” ಎಂದು ಲುಧಿಯಾನದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸ್ವಾತಿ ತಿವಾನಾ ತಿಳಿಸಿದ್ದಾರೆ.
ಈ ದುರ್ಘಟನೆಗೆ ಕಾರಣ ಮತ್ತು ಅನಿಲದ ಸ್ವರೂಪ ಮತ್ತು ಮೂಲಗಳ ಬಗ್ಗೆ ಇನ್ನೂ ತಿಳಿದಿಲ್ಲ ಮತ್ತು ಎನ್ಡಿಆರ್ಎಫ್ ತಂಡವು ಅದನ್ನು ತನಿಖೆ ನಡೆಸುತ್ತದೆ ವರದಿ ತಿಳಿಸಿದೆ.