ನ್ಯೂಸ್ ನಾಟೌಟ್: ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ 28 ಲಕ್ಷ ರೂಪಾಯಿ ಬಹುಮಾನ ಹೊತ್ತಿದ್ದ ಇಬ್ಬರು ಮಹಿಳಾ ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ಈ ಮಾಹಿತಿ ನೀಡಿದ್ದಾರೆ.
ಗರ್ಹಿ ಪೊಲೀಸ್ ಠಾಣೆ ವ್ಯಾಪ್ತಿಯ ಕಡ್ಲಾ ಅರಣ್ಯ ಪ್ರದೇಶದಲ್ಲಿ ಪೊಲೀಸರು ಮತ್ತು ನಕ್ಸಲೀಯರು ಇಂದು ಬೆಳಗ್ಗೆ ಮುಖಾಮುಖಿಯಾಗಿದ್ದ ವೇಳೆ ಎನ್ಕೌಂಟರ್ ನಡೆದಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಸಮೀರ್ ಸೌರಭ್ ಹೇಳಿದ್ದಾರೆ.
ಹತ್ಯೆಯಾದ ಮಾವೋವಾದಿಗಳನ್ನು ಪ್ರದೇಶ ಸಮಿತಿ ಸದಸ್ಯೆ ಸುನೀತಾ ಮತ್ತು ಮಾವೋವಾದಿಗಳ ವಿಭಾಗವಾದ ಭೋರಾಮ್ಡಿಯೋ ಸಮಿತಿಯ ಕಮಾಂಡರ್ ಮತ್ತು ವಿಸ್ತಾರ್ ದಲಂನಲ್ಲಿ ಸಕ್ರಿಯವಾಗಿರುವ ಎಸಿಎಂ ಸರಿತಾ ಖತಿಯಾ ಮೋಚಾ ಎಂದು ಗುರುತಿಸಲಾಗಿದೆ ಎಂದು ಹೇಳಿದರು.
ಇಬ್ಬರಿಗೂ ಮಾವೋವಾದಿಗಳು ತಲಾ 14 ಲಕ್ಷ ರೂಪಾಯಿ ಬಹುಮಾನವಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಅವರಿಂದ ಬಂದೂಕುಗಳು, ಕಾರ್ಟ್ರಿಡ್ಜ್ಗಳು, ಇತರ ಕೆಲವು ಮದ್ದುಗುಂಡುಗಳು ಮತ್ತು ನಕ್ಸಲ್ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಈ ಪ್ರದೇಶದಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಪೊಲೀಸರು ತಿಳಿಸಿದ್ದಾರೆ.