ನ್ಯೂಸ್ ನಾಟೌಟ್: ಅಶ್ಲೀಲ ವಿಡಿಯೋ ಮಾಡಿ ವ್ಯಕ್ತಿಯೊಬ್ಬರಿಗೆ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟು, ರೂ 1.50 ಲಕ್ಷ ಹಣ ಪಡೆದು ವಂಚನೆ ಮಾಡಿದ ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ದೂರುದಾರನಿಗೆ ಆರೋಪಿತರು ಫೋನ್ ಮಾಡಿದ್ದು ಮಿಸ್ ಕಾಲ್ ಆಗಿರುತ್ತದೆ. ನಂತರ ವಾಪಾಸ್ ಫೋನ್ ಮಾಡಿದಾಗ ಗಂಗಾ ಹೆಸರಿನ ಹಿರೇಮಳಲಿ ಗ್ರಾಮದವಳು ಅಂತಾ ಪರಿಚಯಿಸಿಕೊಂಡು ಪ್ರತಿನಿತ್ಯ ಫೋನ್ ನಲ್ಲಿ ಮಾತನಾಡಿ ಹಣ ಹಾಕಿಸಿಕೊಂಡಿದ್ದಾರೆ. ನಂತರ ದಿ:26-03-23 ರಂದು ಪಿರ್ಯಾದಿ ದಾವಣಗೆರೆಗೆ ಬಂದಿದ್ದಾಗ ಗಂಗ, ಹರೀಶ, ಚಂದ್ರು ಮತ್ತೊಬ್ಬ ವ್ಯಕ್ತಿ ಹಾಗೂ ಗಿಡ್ಡ ಗಂಗಮ್ಮ ಹಾಗೂ ಇನ್ನೊಬ್ಬ ಮಹಿಳೆ ಜೊತೆ ಸೇರಿಕೊಂಡು ಒಳಸಂಚು ಮಾಡಿ ತಮ್ಮ ಜೊತೆಗೆ ಊಟಕ್ಕೆ ಬರಬೇಕೆಂದು ಒತ್ತಾಯ ಮಾಡಿದ್ದಾರೆ.
ಸಿದ್ದವೀರರಪ್ಪ ಬಡಾವಣೆಯ ಮನೆಗೆ ಕರೆಯಿಸಿಕೊಂಡು ಆರೋಪಿತರೆಲ್ಲ ಸೇರಿಕೊಂಡು ವ್ಯಕ್ತಿಯನ್ನು ಹೆದರಿಸಿ ಅಶ್ಲೀಲವಾಗಿ ವಿಡಿಯೋ ಮಾಡಿ ಬಲವಂತವಾಗಿ 30 ಲಕ್ಷಕ್ಕೆ ಬೇಡಿಕೆ ಇಟ್ಟು1.50 ಲಕ್ಷಗಳನ್ನು ಪಡೆದುಕೊಂಡು ಈ ವಿಚಾರವನ್ನು ಯಾರಿಗಾದರೂ ಹೇಳಿದಲ್ಲಿ ಜೀವಸಹಿತ ಬಿಡುವುದಿಲ್ಲ ಅಂತಾ ಪ್ರಾಣಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲು ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಆರೋಪಿಗಳ ತಂಡವನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.