ನ್ಯೂಸ್ ನಾಟೌಟ್: ಕಳೆದ ತಿಂಗಳು ಪತಿಯನ್ನು ಕೊಂದ ಆರೋಪದ ಮೇಲೆ 24 ವರ್ಷದ ಯುವತಿ ಹಾಗೂ ಆಕೆಯ ಪರಪುರುಷನನ್ನು ಬಂಧಿಸಲಾಗಿತ್ತು. ಬಲಿಪಶುವನ್ನು ಕ್ವಾರಿಗೆ ತಳ್ಳಲಾಯಿತು ಆದರೆ ಅವನು ಬದುಕುಳಿದಿರುವುದನ್ನು ನೋಡಿದ ಮೇಲೆ, ಅವನ ಕತ್ತು ಹಿಸುಕಿ ಕೊಂದ ಘಟನೆ ನಡೆದಿತ್ತು, ಈಗ ಆರೋಪ ಸಾಭೀತಾದ ಮೇಲೆ ಎಪ್ರಿಲ್ 6 ರಂದು ಆರೋಪಿಗಳನ್ನು ಬಂಧಿಸಲಾಗಿದೆ.
ಮಾರ್ಚ್ 31 ರಂದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ವಗ್ರಾಲ್ಪಾಡಾದಲ್ಲಿ ಕ್ವಾರಿಯಲ್ಲಿ ಶವ ಬಿದ್ದಿರುವ ಬಗ್ಗೆ ವಲಿವ್ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಮೃತದೇಹವು ಅದೇ ಪ್ರದೇಶದ ನಿವಾಸಿ ಮತ್ತು ತರಕಾರಿ ಮಾರಾಟಗಾರ ಸುನಿಲ್ ದುಬೆ (32) ಎಂದು ಗುರುತಿಸಲಾಗಿದೆ. ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು ಆದರೆ ಇತ್ತೀಚೆಗೆ ಅದು ಕೊಲೆ ಎಂದು ತನಿಖೆಯಿಂದ ತಿಳಿದುಬಂದಿದೆ. ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ದುಬೆ ಅವರ ಪತ್ನಿ ಮುನ್ನಿದೇವಿ ಅವರು ಅದೇ ಪ್ರದೇಶದ ನಿವಾಸಿ ಸಂಜಯ್ ಪ್ರಸಾದ್ (24) ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಸಂಬಂಧ ದುಬೆಗೆ ಈ ವಿಷಯ ತಿಳಿದು ಹೆಂಡತಿಯ ಜೊತೆಗೆ ಗಲಾಟೆ ಮಾಡಿದ್ದರು.
ಈ ಕಾರಣದಿಂದ ಅವಳು ಸಂಜಯ್ ಜೊತೆಗೆ ಸೇರಿ ಗಂಡನನ್ನು ಕೊಳ್ಳಲು ನಿರ್ಧರಿಸಿದ್ದಾರೆ. ಮಾರ್ಚ್ 31 ರಂದು ಸಂಜಯ್ ಅವರು ಮುನ್ನಿದೇವಿಯೊಂದಿಗೆ ಸಂಬಂಧ ಹೊಂದಿಲ್ಲ ಎಂದು ವಿವರಿಸುವ ನೆಪದಲ್ಲಿ ದುಬೆಯನ್ನು ಕುಡಿಯಲು ಕರೆದೊಯ್ದಿದ್ದರು. ಚೆನ್ನಾಗಿ ಕುಡಿಸಿದ ಬಳಿಕ ಗುಡ್ಡದ ಮೇಲೆ ಕರೆದೊಯ್ದು ಅಲ್ಲಿಂದ ಸಂಜಯ್ ದುಬೆಯನ್ನು ಕಲ್ಲಿನ ಕ್ವಾರಿಗೆ ತಳ್ಳಿದ್ದಾರೆ ಎಂದು ವಿಷಯ ಬೆಳಕಿಗೆ ಬಂದಿದೆ.
ಆದರೆ, ತಲೆಗೆ ಪೆಟ್ಟು ಬಿದ್ದಿ ಆತ ನಂತರ ಜೀವಂತರುವುದು ಕಂಡು ಸಂಜಯ್ ಕ್ವಾರಿಗೆ ಇಳಿದು ನೈಲಾನ್ ಹಗ್ಗದಿಂದ ಕತ್ತು ಹಿಸುಕಿದ್ದಾನೆ. ಮುನ್ನಿದೇವಿ ಅಪರಾಧ ನಡೆದ ಸ್ಥಳಕ್ಕೆ ಹೋಗದಿದ್ದರೂ ಸಂಜಯ್ ಜೊತೆ ಸೇರಿ ಹತ್ಯೆಗೆ ಯೋಜನೆ ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.