ನ್ಯೂಸ್ ನಾಟೌಟ್ : ಅಪರಿಚಿತ ವ್ಯಕ್ತಿಯೋರ್ವ ದ.ಕ. ಜಿಲ್ಲಾಧಿಕಾರಿಗೆ ಕರೆಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ ಘಟನೆ ವರದಿಯಾಗಿದೆ.ಈ ಕುರಿತಂತೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಏನಿದು ಕರೆ?
ಚುನಾವಣಾ ದಿನಾಂಕ ಸಮೀಪಿಸುತ್ತಿರುದರಿಂದ ಅಧಿಕಾರಿಗಳು ಬ್ಯುಸಿಯಾಗಿದ್ದು, ಈ ಹಿನ್ನಲೆಯಲ್ಲಿಯೇ ಚುನಾವಣಾ ವೀಕ್ಷಕರೊಂದಿಗೆ ಸಭೆ ನಡೆಸುತ್ತಿದ್ದರು.ಅಂದು ಏ.೨೦ ಮಧ್ಯಾಹ್ನ ಊಟ ಮುಗಿಸಿ ಇನ್ನೇನು ಮೀಟಿಂಗ್ ಆರಂಭವಾಗಬೇಕು ಅನ್ನುವಷ್ಟರಲ್ಲಿ ಫೋನ್ ಬರುತ್ತದೆ.ಈ ವೇಳೆ ಅಧಿಕಾರಿಗಳು ಕಾಲ್ ರಿಸೀವ್ ಮಾಡಿ ಮಾತಾಡುವ ವೇಳೆ ಅಪರಿಚಿತ ವ್ಯಕ್ತಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಮಾತ್ರವಲ್ಲ ಬೆದರಿಕೆಯನ್ನು ಹಾಕಿದ್ದಾನೆ. ‘ಒಂದೂವರೆ ತಿಂಗಳ ಕಾಣಿಕೆ ನೀಡುತ್ತೇವೆ. ತಕ್ಷಣ ಓರ್ವ ಕೆಎಂಎಫ್ ಸಿಬ್ಬಂದಿಯನ್ನು ಮಂಗಳೂರಿನಿಂದ ತುಮಕೂರಿಗೆ ಕಳುಹಿಸಿಕೊಡಬೇಕು’ ಎಂದು ಹೇಳಿದ್ದಾನೆ.ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.