ನ್ಯೂಸ್ ನಾಟೌಟ್ : ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ ಅವರ ಪತ್ನಿ ದೂರು ನೀಡಿದ ಘಟನೆ ವರದಿಯಾಗಿದೆ.ಬೆಂಗಳೂರಿನ ಪೂರ್ವ ವಿಭಾಗದ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆಕಾಶ್ ವಿರುದ್ಧ ಅವರ ಪತ್ನಿ ವಂದನಾ ದೂರು ದಾಖಲಿಸಿದ್ದಾರೆ.
ಆಕಾಶ್ ಮತ್ತು ವಂದನಾ 2022ರಲ್ಲಿ ವಿವಾಹವಾಗಿದ್ದಾಗಲೇ ವರದಕ್ಷಿಣೆ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಈಗಲೂ ಇನ್ನಷ್ಟು ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾರೆ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ತವರಿನಿಂದ ಹಣ ತರಲು ಒಪ್ಪದಿದ್ದುದಕ್ಕೆ ತನ್ನ ಮೇಲೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಂದನಾ ದೂರು ನೀಡಿದ್ದಾರೆ.ಆಕಾಶ್, ಅವರ ತಂದೆ-ತಾಯಿ ಹಾಗೂ ಸಹೋದರನ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ವಂದನಾ ಅವರು ನಿವೃತ್ತ ಡಿಐಜಿ ಪುತ್ರಿಯಾಗಿದ್ದಾರೆ.