ನ್ಯೂಸ್ನಾಟೌಟ್: ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಅಂಬಾಸಮುದ್ರಂ ಪೊಲೀಸ್ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಬಲವೀರ್ಸಿಂಗ್ ಎಂಬ ಐಪಿಎಸ್ ಅಧಿಕಾರಿಯೊಬ್ಬರು ತಮಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದಾರೆಂದು ಕೈದಿಗಳು ಆರೋಪಿಸಿದ್ದಾರೆ.
ತಾವು ನೀಡಿದ್ದ ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ತಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆಯೆಂದು ತಮಿಳುನಾಡಿನ ಜೈಲೊಂದರಲ್ಲಿ ಬಂಧನದಲ್ಲಿರುವ ಕೆಲವು ಕೈದಿಗಳು ಆರೋಪಿಸಿದ್ದಾರೆ. ಅವರು ಕಸ್ಟಡಿಯಲ್ಲಿ ತಮಗೆ ಚಿತ್ರಹಿಂಸೆ ನೀಡಿದ್ದು, ತಮ್ಮ ಹಲ್ಲುಗಳನ್ನು ಮುರಿದುಹಾಕಿದ್ದಾರೆ ಹಾಗೂ ಅವರ ವೃಷಣಗಳನ್ನು ಜಜ್ಜಿದ್ದಾರೆಂದು ಬಂಧಿತರು ಆರೋಪಿಸಲಾಗಿದೆ. ಚಿತ್ರಹಿಂಸೆಗೊಳಗಾಗಿದ್ದಾರೆನ್ನಲಾದ 13 ಮಂದಿ ವ್ಯಕ್ತಿಗಳು ಈ ರೀತಿ ಆರೋಪಿಸಿದ್ದಾರೆ.
ಬಲವೀರ್ಸಿಂಗ್ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮಾರ್ಚ್ 29 ರಂದು ಅಮಾನತುಗೊಳಿಸಿದ್ದಾರೆ ಹಾಗೂ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.