ನ್ಯೂಸ್ ನಾಟೌಟ್ : ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ.ನೀತಿಸಂಹಿತೆಯೂ ಜಾರಿಯಲ್ಲಿದೆ.ಈ ನಿಟ್ಟಿನಲ್ಲಿ ಆಟೋ ಚಾಲಕರು ಕೂಡ ತುಂಬಾ ಎಚ್ಚರಿಕೆಯಲ್ಲಿರಬೇಕಾಗುತ್ತದೆ.ಏಕೆಂದರೆ ಆಟೋ ಮೇಲೆ ರಾಜಕೀಯ ನಾಯಕರ ಭಾವಚಿತ್ರ, ಚಿಹ್ನೆ ಇರುವಂತಿಲ್ಲ. ಹಾಗೇನಾದರು ಇದ್ದಲ್ಲಿ ಚಾಲಕರಿಗೆ ಆರ್ ಟಿ ಓ ಅಧಿಕಾರಿಗಳಿಂದ ಫೈನ್ ಬೀಳುವುದು ಬೀಳುವುದು ಖಚಿತ.
ಬೆಂಗಳೂರಿನಲ್ಲಿ ಈ ಘಟನೆ ವರದಿಯಾಗಿದ್ದು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಆರ್ ಟಿಒ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಜೆಡಿಎಸ್ ಪರ ಪ್ರಚಾರ ಮಾಡುವ ಕವರ್ ಅಂಟಿಸಿದ್ದ ಆಟೋ ಚಾಲಕನಿಗೆ ಆರ್ ಟಿಓ ಅಧಿಕಾರಿಗಳು 5,000 ರೂ. ದಂಡ ವಿಧಿಸಿ ಶಾಕ್ ನೀಡಿದ್ದಾರೆ. ಆಟೋ ಮೇಲೆ ರಾಜಕೀಯ ಪ್ರೇರಿತ ಫೋಟೋ, ಚಿಹ್ನೆ ಇದ್ದರೆ ನೀವು 5,000 ರೂ. ದಂಡ ತೆರಬೇಕಾಗುತ್ತದೆ. ಆರ್ ಟಿಒ ಅಧಿಕಾರಿಗಳು ಪರ್ಮಿಟ್ ಉಲ್ಲಂಘನೆ ಕೇಸ್ ದಾಖಲು ಮಾಡುತ್ತಿದ್ದಾರೆ. ಕೇಸ್ ಹಾಕಿ 2 ಸಾವಿರ ರೂ. ದಂಡ ವಿಧಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.