ನ್ಯೂಸ್ ನಾಟೌಟ್ : ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಎಸ್ಐ) ಪೊಲೀಸ್ ಠಾಣೆಯೊಳಗೆ ಮಹಿಳೆಯೊಬ್ಬರನ್ನು ಅನುಚಿತವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪ ಬೆಂಗಳೂರಿನಲ್ಲಿ ಬುಧವಾರ ವರದಿಯಾಗಿದೆ.
ಸಬ್ ಇನ್ಸ್ಪೆಕ್ಟರ್ ಮಂಜುನಾಥ್, ಬೆಂಗಳೂರಿನ ಆಗ್ನೇಯ ವಿಭಾಗದ ಸುದ್ದಗುಂಟೆಪಾಳ್ಯ (ಎಸ್ಜಿ ಪಾಳ್ಯ) ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿಚ್ಛೇದನ ಪ್ರಕರಣದಲ್ಲಿ ಸಾಕ್ಷಿ ಹೇಳಿಕೆ ನೀಡಲು ಮಹಿಳೆ ಪೊಲೀಸ್ ಠಾಣೆಗೆ ಹೋದಾಗ ಏಪ್ರಿಲ್ 8 ರಂದು ಈ ಘಟನೆ ನಡೆದಿದೆ.
ಮಾತನಾಡುತ್ತಾ ಎಸ್ಐ ಅವಳ ಕಡೆಗೆ ಹೋಗುತ್ತಾನೆ, ಅವಳ ಕೈಯನ್ನು ಮುಟ್ಟಿದ್ದಾರೆ ಮತ್ತು ನಂತರ, ಅವಳು ಠಾಣೆಯಿಂದ ಹೊರಡುವಾಗ ಅವಳ ದೇಹವನ್ನು ಮುಟ್ಟಿದ್ದಾನೆ ಎನ್ನಲಾಗಿದೆ. ಆತನ ವರ್ತನೆಯು ಅಸಭ್ಯವಾಗಿತ್ತು ಮತ್ತು ಅವನು ಪ್ರಕರಣ ದಾಖಲಿಸಿಕೊಳ್ಳುವಾಗ ನೀಡಿದ ಫೋನ್ ಸಂಖ್ಯೆ ಬಳಸಿ ತನಗೆ ಅನುಚಿತ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ಆಕೆ ಆರೊಪಿಸಿದ್ದಾಳೆ.
ಮಹಿಳೆ ಏಪ್ರಿಲ್ 10 ರಂದು ಸಾಮಾಜಿಕ ಮಾಧ್ಯಮದಲ್ಲಿ ತನಗಾಗುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಪೋಸ್ಟ್ ಮಾಡಿದ್ದಳು, ಆದರೆ ನಂತರ ತನ್ನ ಟ್ವೀಟ್ಗಳನ್ನು ಅಳಿಸಿ ಹಾಕಿದ್ದಾಳೆ, ಟ್ವೀಟ್ ವೈರಲ್ ಆದ ನಂತರ ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ವಿಷಯ ತಿಳಿದು ಆಕೆಯನ್ನು ವಿಚಾರಿಸಿ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ದೂರುದಾರರು ಮಂಗಳವಾರ ಸಂಜೆ ಬೆಂಗಳೂರಿನ ಆಗ್ನೇಯ ವಲಯದ ಡಿಸಿಪಿ ಸಿಕೆ ಬಾಬಾ ಅವರನ್ನು ಭೇಟಿಯಾಗಿದ್ದು, ನಂತರ ಡಿಸಿಪಿ ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದರು ಮತ್ತು ಎಫ್ಐಆರ್ ದಾಖಲಿಸಿದ್ದಾರೆ.