ನ್ಯೂಸ್ ನಾಟೌಟ್ : ಯುವಕನೋರ್ವ ಕೇರಳ ಲಾಟರಿಯಲ್ಲಿ ೮೦ ಲಕ್ಷ ಗೆದ್ದ ಮರುದಿನವೇ ನಿಗೂಢವಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಈತ ಸ್ನೇಹಿತನ ಮನೆಯಲ್ಲಿ ಮದ್ಯದ ಪಾರ್ಟಿಯಲ್ಲಿ ಭಾಗವಹಿಸಿದ್ದು ಕೆಲ ಸಮಯದ ಬಳಿಕ ಆಳವಾದ ಹೊಂಡಕ್ಕೆ ಬಿದ್ದಿದ್ದು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ತಿರುವನಂತಪುರಂನ ಪಂಗೋಡು ಮೂಲದ ಸಜೀವ್ (35) ಮೃತ ಯುವಕ ಎಂದು ತಿಳಿದು ಬಂದಿದೆ.
ಅಪರೂಪದಲ್ಲಿ ಸಜೀವ್ ಕಳೆದ ತಿಂಗಳು ಲಾಟರಿ ಗೆದ್ದಿದ್ದರು. ಕೆಲ ದಿನಗಳ ಹಿಂದಷ್ಟೇ ಅವರ ಬ್ಯಾಂಕ್ ಖಾತೆಗೆ ಬಹುಮಾನದ ಹಣ ಜಮೆಯಾಗಿತ್ತು. ಇದರ ಬೆನ್ನಲ್ಲೇ ಏಪ್ರಿಲ್ 1ರಂದು ರಾತ್ರಿ 9 ಗಂಟೆ ಸುಮಾರಿಗೆ ಪಂಗೋಡಿನಲ್ಲಿರುವ ರಾಜೇಂದ್ರನ್ ಪಿಳ್ಳೈ ಅವರ ಬಾಡಿಗೆ ಮನೆಯಲ್ಲಿ ಸಜೀವ್ ಮತ್ತು ಆತನ ಸ್ನೇಹಿತರು ಮದ್ಯದ ಪಾರ್ಟಿಗಾಗಿ ಸೇರಿದ್ದರು.ವರದಿಗಳ ಪ್ರಕಾರ ಸಂತೋಷ್ ಎಂಬ ವ್ಯಕ್ತಿ ಸಜೀವ್ ಅವರನ್ನು ತಳ್ಳಿದ್ದರಿಂದ ಅವರು ರಬ್ಬರ್ ತೋಟದಲ್ಲಿ ಹೊಂಡಕ್ಕೆ ಬಿದ್ದಿದ್ದಾರೆ. ಸ್ವಲ್ಪ ಸಮಯದ ನಂತರ, ಸಜೀವ್ ಅನಾರೋಗ್ಯಕ್ಕೆ ಒಳಗಾಗಿದ್ದಾನೆ ಎನ್ನಲಾಗಿದೆ. ಅವನ ಸ್ನೇಹಿತರು ಅವನ ಸಹೋದರನಿಗೆ ವಿಷಯ ತಿಳಿಸಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಈ ವೇಳೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸಜೀವ್ನನ್ನು ಪಂಗೋಡೆಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಈ ಸಂಬಂಧ ಪಂಗೋಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.