ನ್ಯೂಸ್ ನಾಟೌಟ್: ಅವಿವಾಹಿತ ಯುವತಿ 4 ತಿಂಗಳ ಗರ್ಭಿಣಿಯಾಗಿದ್ದಳು. ಈ ವಿಷಯವನ್ನು ಮುಚ್ಚಿಡುವ ಪ್ರಯತ್ನದಲ್ಲಿ ಆಕೆ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. 19 ವರ್ಷದ ಯುವತಿಯು ಸಾವನ್ನಪ್ಪಿದ ಈ ಘಟನೆ ಹರಿಯಾಣದ ಹಿಸಾರ್ ಜಿಲ್ಲೆಯ ಆಗ್ರೋಹಾದಲ್ಲಿ ಮಾರ್ಚ್ ೨೨ರಂದು ಈ ಘಟನೆ ನಡೆದಿದೆ.
ಈ ಹಿನ್ನೆಲೆಯಲ್ಲಿ ಆಕೆಯ ಸಂಬಂಧಿಕರು ಆಕೆಯನ್ನು ಗರ್ಭಪಾತಕ್ಕಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಆಕೆಗೆ ಗರ್ಭಪಾತಕ್ಕೆ ಪ್ರಯತ್ನಿಸಲಾಗಿದೆ. ಆದರೆ ಇದರಿಂದಾಗಿ ಯುವತಿಯ ಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು, ಅದಾದ ಬಳಿಕ ಆಕೆಯನ್ನು ಪೋಷಕರು ಸಿವಿಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ದುರದೃಷ್ಟವಶಾತ್, ಅಲ್ಲಿಂದ ಮತ್ತೆ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದ್ದು, ಆಕೆಯ ಸ್ಥತಿ ಮತ್ತಷ್ಟು ಗಂಭೀರವಾಗಿತ್ತು. ಈ ಸ್ಥಿತಿಯಲ್ಲಿದ್ದ ಯುವತಿಯ ಕರುಳುಗಳು ಹೊರಬಂದು ಗರ್ಭಾಶಯದಲ್ಲಿ ಗಾಯಗಳಾಗಿತ್ತು. ಅಷ್ಟೇ ಅಲ್ಲದೇ ಮೂತ್ರಪಿಂಡಗಳು ಸಹ ವಿಫಲವಾಗಿದ್ದ ಕಾರಣ ಆಕೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾಳೆ ಎಂದು ವರದಿ ತಿಳಿಸಿದೆ.