ನ್ಯೂಸ್ ನಾಟೌಟ್: ಪೆರಾಜೆ ಗ್ರಾಮದ ಪಯಸ್ವಿನಿ ನದಿಯ ಕಿನಾರೆ ಬಳಿಯ ಮುಸ್ಲಿಂ ಕುಟುಂಬವೊಂದು ಪಯಸ್ವಿನಿ ಹೊಳೆ ಸಂಪರ್ಕಿಸುವ ರಸ್ತೆಯನ್ನು ತಡೆದು ಬಂದ್ ಮಾಡಿದ ಘಟನೆ ವರದಿಯಾಗಿತ್ತು. ಈ ಕುರಿತು ಮಾ.8 ರಂದು ಸಂಜೆ ವೇಳೆ ಕೇಳಲು ಬಂದ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ತಾ.ಪಂ ಸದಸ್ಯರೊಂದಿಗೆ ಮನೆಯವರು ವಾಗ್ವಾದ ನಡೆಸಿ ಹಲ್ಲೆಗೆ ಮುಂದಾದರು ಎಂಬ ಘಟನೆ ಕುರಿತು ಸಂಪಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಏನಿದು ಘಟನೆ?
ಪಯಸ್ವಿನಿ ಹೊಳೆ ಸಂಪರ್ಕಿಸುವ ರಸ್ತೆಯನ್ನು ತಗಡು ಶೀಟಿನಿಂದ್ ಬಂದ್ ಮಾಡಿದ ಹಿನ್ನಲೆ ಸ್ಥಳಕ್ಕೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ತಾ. ಪಂ ಸದಸ್ಯರು ಬಂದು ಮುಸ್ಲಿಂ ಕುಟುಂಬದೊಂದಿಗೆ ವಿಚಾರಿಸಿದ್ದಾರೆ. ಈ ಸಂದರ್ಭ ಮನೆಯವರು ವಾಗ್ವಾದ ನಡೆಸಿ ಹಲ್ಲೆಗೆ ಮುಂದಾದರು. ದಾರಿಯಲ್ಲಿ ಸಾಗಿಬಂದ ಕಿರಣ್ ಕುಂಬಳಚೇರಿ, ಪ್ರಕಾಶ್ ಕೊಳಂಗಾಯ ಹಾಗೂ ಮತ್ತೋರ್ವರು ಹೊಳೆಗೆ ಇಳಿವ ರಸ್ತೆಯ ತಗಡು ಶೀಟು ತೆರವು ಮಾಡಿದರು. ಈ ಹಿನ್ನಲೆ ಮುಸ್ಲಿಂ ಕುಟುಂಬ ಆಕ್ರೋಶಿತರಾಗಿ ಕಿರಣ್ ಮತ್ತು ಪ್ರಕಾಶ್ ಮೇಲೆ ಅಕ್ರಮ ಪ್ರವೇಶ, ಅವಾಚ್ಯ ನಿಂದನೆ ಮತ್ತು ಮಾನ ಹಾನಿಕರ ನಡವಳಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಸಂಪಾಜೆ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
ವಿಚಾರಣೆಗೆ ಬಂದ ಪೊಲೀಸರು:
ದೂರು ನೀಡಿದ ಹಿನ್ನಲೆ ಮನೆಗೆ ಪೊಲೀಸರು ವಿಚಾರಣೆ ನಡೆಸಿದರು.ಈ ವೇಳೆ ಮರದ ದಿಮ್ಮಿಗಳು ಮನೆ ಹಿಂಬದಿಯಲ್ಲಿ ಕಂಡುಬಂದಿದೆ. ಅಕ್ರಮ ದಾಸ್ತಾನಿರಿಸಿದ್ದ ಬೀಟಿ ಹಾಗೂ ಸಾಗುವಾನಿ ಮರದ ದಿಮ್ಮಿಗಳು ಕಂಡು ಬಂದ ಹಿನ್ನಲೆಯಲ್ಲಿ ಅರಣ್ಯಾಧಿಕಾರಿಗಳಿಗೆ ಮಾಹಿತಿಹೋಗಿ ಮರ ಮುಟ್ಟುಗೋಲು ಹಾಕಿದಲ್ಲದೆ , ಈ ಸಂದರ್ಭದಲ್ಲಿ ಮನೆಯವರ ನಡವಳಿಕೆಗೆ ಆಕ್ರೋಶಿತರಾಗಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಬಂದು ಉದ್ವಿಗ್ನ ಸ್ಥಿತಿ ನಿರ್ಮಾಣ ವಾದ ಘಟನೆ ,ಮಾ 9 ಸಂಜೆ ವೇಳೆ ನಡೆದಿದೆ.
ಏಕೆ ರೋಡ್ ಬಂದ್?
ಪೆರಾಜೆ ಶಾಸ್ತಾವು ದೇವಸ್ಥಾನದ ಜಾತ್ರೆ ಮಾ.10 ರಿಂದ ಆರಂಭವಾಗಿ ಎ.10 ರಂದು ಒತ್ತೆಕೋಲ ಮತ್ತು ಮಾರಿಕಳ ನಡೆಯಲಿದೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ದೈವಕ್ಕೆ ಸಮರ್ಪಿಸುವ ಹಂದಿ, ಕೋಳಿ ಹೊಳೆ ಬದಿಯಲ್ಲಿ ಅಡುಗೆ ಮಾಡಿ ಬಡಿಸಿ ಊಟ ಮಾಡಿ ಬರುವ ಪದ್ದತಿ ತಲೆತಲಾಂತರಗಳಿಂದ ಬಂದಿದೆ. ಈ ರೀತಿಯ ಪದ್ದತಿ ಹೊಳೆಯ ಬದಿ ವಾಸಮಾಡುತ್ತಿರುವ ಕುಟುಂಬವೊಂದಕ್ಕೆ ಮುಜುಗರ ವಾಗುವ ಹಿನ್ನಲೆಯಲ್ಲಿಆ ಕುಟುಂಬ ಕೆಲವು ವರ್ಷಗಳಿಂದ ತಕರಾರು ತೆಗೆದಿದೆ. ಇದು ಒಂದು ರೀತಿಯಲ್ಲಿ ಗ್ರಾಮಸ್ಥರ ಆಕ್ರೋಶಕ್ಕೂ ಕಾರಣವಾಗಿ ಗ್ರಾಮಸ್ಥರ ನಂಬಿಕೆಯನ್ನು ಪ್ರಶ್ನೆ ಮಾಡುವಂತ ಸನ್ನಿವೇಶ ಕೆಲವು ವರ್ಷದಿಂದ ನಿರ್ಮಾಣವಾಗಿತ್ತು.
ದೇವಸ್ಥಾನದ ಜಾತ್ರೆ ಇರುವುದರಿಂದ ಇದೀಗ ಮತ್ತೆ ಕಳೆದ ಒಂದು ವಾರಗಳ ಹಿಂದೆ ಸೇರಿ ಹೊಳೆ ಸಂಪರ್ಕಿಸುವ ರಸ್ತೆಯನ್ನು ತಗಡು ಶೀಟು ಹಾಕಿ ಮುಚ್ಚಿದ್ದರು ಎನ್ನಲಾಗಿದೆ.
ಗ್ರಾಮಸ್ಥರ ವಿರೋಧ:
ರಸ್ತೆಯ ತಗಡು ಶೀಟು ಗ್ರಾಮಕ್ಕೆ ನೀರು ತೆರವು ಮಾಡಲು ಸ್ಥಳೀಯರು ವಿರೋಧಿಸಿದ್ದಾರೆ. ಸರಬರಾಜು ಮಾಡುವ ಜಾಕ್ವೆಲ್ ಹಾಗೂ ಜಾತ್ರಾ ಸಮಯ ಹೊಳೆಗೆ ಇಳಿವ ಸಾರ್ವಜನಿಕ ರಸ್ತೆ ಬಂದ್ ಮಾಡಿದ ಹಿನ್ನಲೆ ಪೆರಾಜೆ ಗ್ರಾಮ ಪಂಚಾಯತ್ ಅಧಿಕಾರಿ ಮತ್ತು ಮಾ.ತಾ ಪಂ ಸದಸ್ಯ ನಾಗೇಶ್ ಕುಂದಲ್ಪಾಡಿ ಕೇಳಲು ಹೋದಾಗ ಅಬ್ದುಲ್ ಮುಹಿದಿ ತೀವ್ರ ವಿರೋಧ ವ್ಯಕ್ತಪಡಿಸಿದರೆಂದು ಹೇಳಲಾಗಿದೆ.
ಇದೇ ಸಂದರ್ಭದಲ್ಲಿ ಕುಂಬಳಚೇರಿಯಿಂದ ಪೆರಾಜೆ ಕಡೆಗೆ ಬರುತ್ತಿದ್ದ, ಕಿರಣ್ ಹಾಗೂ ಪ್ರಕಾಶ್ ಇದನ್ನು ಗಮನಿಸಿ ತಗಡು ಶೀಟು ಸರಿಸಿ ರಸ್ತೆ ಸಂಚಾರ ಸುಗಮ ಮಾಡಿದರು. ಆ ಸಂದರ್ಭ ಮುಸ್ಲಿಂ ಕುಟುಂಬದ ಮನೆಯವರು ಕಿರಣ್ ಮತ್ತು ಪ್ರಕಾಶ್ ಮೇಲೆ ಅವಾಚ್ಯ ನಿಂದನೆ ಮಾಡಿದ್ದಾರೆ. ಈ ಸಂಬಂಧ ಕುಟುಂಬದ ವಿರುದ್ಧ ವಿವಿಧ ಆರೋಪದಡಿ ದೂರು ದಾಖಲಿಸಲಾಗಿದೆ.
ಮನೆಗೆ ಅರಣ್ಯ ಅಧಿಕಾರಿಗಳ ದಾಳಿ:
ಮುಸ್ಲಿಂ ಮನೆಗೆ ವಿಚಾರಣೆಗೆ ಬಂದ ಪೊಲೀಸರಿಗೆ ಅಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ, ಬೀಟಿ ಹಾಗೂ ಸಾಗುವಾನಿ ಮರದ ದಿಮ್ಮಿಗಳು ಕಂಡು ಬಂದ ಹಿನ್ನಲೆ ಕೂಡಲೆ ಅವರು ಅರಣ್ಯಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳ ತಂಡ ದಾಳಿನಡೆಸಿ, ಅಕ್ರಮವಾಗಿ ಮನೆಯ ಹಿಂಭಾಗದಲ್ಲಿದ್ದ ಮರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಸ್ಥಳಕ್ಕೆ ಜಮಾಯಿಸಿದ ಸಾರ್ವಜನಿಕರು:
ಮನೆಯ ಮುಂಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ತಾ.ಪಂ ಸದಸ್ಯ ನಾಗೇಶ್ ಕುಂದಲ್ಪಾಡಿ ಸೇರಿದಂತೆ ಅಧಿಕಾರಿಗಳು ಸಾರ್ವಜನಿಕರನ್ನು ತೆರವಾಗುವಂತೆ ನೋಡಿಕೊಂಡರು. ಅಬ್ದುಲ್ ಮುಹಿದಿ ಮನೆಯ ಬಳಿ ಸುಮಾರು ಎರಡು ಪಿಕಪ್ ಅಕ್ರಮ ಮರದ ದಿಮ್ಮಿಗಳು ದೊರಕಿ ಅರಣ್ಯಾಧಿಕಾರಿಗಳು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಮರದ ದಿಮ್ಮಿಗಳನ್ನು ಸಂಪಾಜೆಗೆ ರಾತೋರಾತ್ರಿ ರವಾನೆ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳಾದ ವಿಜೇಯೇಂದ್ರ, ಗಸ್ತು ಅರಣ್ಯ ಪಾಲಕ ನಾಗರಾಜ್ .ಪುರುಷೋತ್ತಮ, ಬಾಬು, ವಸಂತ, ಮಾಧವ ಕೆ ಟಿ, ವಾಹನ ಚಾಲಕರಾದ ಭರತ್, ಸಂಪಾಜೆ ಠಾಣಾ ಪಿ ಎಸ್ ಐ ಶ್ರೀನಿವಾಸ್, ಕಾನಸ್ಟೇಬಲ್, ಜಯಣ್ಣ, ಕರಬಸಪ್ಪ ಚಕ್ರಸಾಲಿ, ಮೊದಲಾದವರು ಭಾಗವಹಿಸಿದ್ದರು.