ನ್ಯೂಸ್ನಾಟೌಟ್: ಬಿಹಾರದಲ್ಲಿ ಮಹಿಳೆಯನ್ನು ಚುಂಬಿಸಿ ಪರಾರಿಯಾಗಿರುವ ಅಪರಿಚಿತನ ವಿಡಿಯೋ ವೈರಲ್ ಆದ ಕೆಲವೇ ದಿನಗಳಲ್ಲಿ ‘ಸೀರಿಯಲ್ ಕಿಸ್ಸರ್’ ಅನ್ನು ಮಂಗಳವಾರ ಮಾರ್ಚ್ 21ರಂದು ಬಂಧಿಸಲಾಗಿದೆ.
ಬಿಹಾರದ ಜಮುಯಿ ಜಿಲ್ಲೆಯ ವ್ಯಕ್ತಿಯೊಬ್ಬ ಸೀರೆಯುಟ್ಟ ಮಹಿಳೆಗೆ ಬಲವಂತವಾಗಿ ಚುಂಬಿಸುತ್ತಿರುವ ವಿಡಿಯೋ ಆನ್ಲೈನ್ನಲ್ಲಿ ಕಾಣಿಸಿಕೊಂಡು ವೈರಲ್ ಆಗಿತ್ತು. ಮಾರ್ಚ್ 10 ರಂದು ಬಿಹಾರದ ಜಮುಯಿಯಲ್ಲಿರುವ ಸದರ್ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತೆಯೊಬ್ಬರು ಈ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ವಿಷಯ ಎಲ್ಲೆಡೆ ಸುದ್ದಿಯಾಗಿತ್ತು.
ಸಂತ್ರಸ್ತೆ ಈ ವಿಷಯದಲ್ಲಿ ಎಫ್ಐಆರ್ ದಾಖಲಿಸಿದ ಕೆಲವು ದಿನಗಳ ನಂತರ, ಘಟನೆಯ ಹಿಂದಿನ ವ್ಯಕ್ತಿಯನ್ನು — “ಸೀರಿಯಲ್ ಕಿಸ್ಸರ್” ಎಂದು ಪೊಲೀಸರು ಗುರುತಿಸಿದ್ದು, ಆತನನ್ನು ಬಂಧಿಸಲಾಗಿದೆ.
ಬಿಹಾರದ ಬೀದಿಗಳಲ್ಲಿ ಮಹಿಳೆಗೆ ಬಲವಂತವಾಗಿ ಚುಂಬಿಸಿದ ಆರೋಪಿ ಮೊಹಮ್ಮದ್ ಅಕ್ರಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಅಕ್ರಂ ಈ ಹಿಂದೆ ಅನೇಕ ಮಹಿಳೆಯರಿಗೆ ಕಿರುಕುಳ ನೀಡಿದ್ದ ಮತ್ತು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಗ್ಯಾಂಗ್ನ ಮುಖ್ಯಸ್ಥ ಎಂದು ತಿಳಿದು ಬಂದಿದೆ.
ಅಕ್ರಂನ ಅಡಗುತಾಣದ ಬಗ್ಗೆ ಖಚಿತ ಮಾಹಿತಿ ದೊರೆತ ಆಧಾರದ ಮೇಲೆ ಪೊಲೀಸರು ಭಾನುವಾರ ಮಾರ್ಚ್ ೧೯ರ ಸಂಜೆ ದಾಳಿ ನಡೆಸಿ ಆತನ ನಾಲ್ವರು ಸಹಚರರೊಂದಿಗೆ ಆತನನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.
“ತಾನು ರಕ್ಷಣೆಗೆ ಇತರರನ್ನು ಕರೆಯುವಷ್ಟರಲ್ಲಿ ಆತ ಪರಾರಿಯಾಗಿದ್ದ.., ಸುತ್ತಲಿನ ಆವರಣ ಗೋಡೆ ದಾಟಿ ಹೋಗಿದ್ದಾನೆ, ಆ ಆವರಣ ಗೋಡೆಗಳು ಅತೀ ತಗ್ಗಾಗಿವೆ ಆಸ್ಪತ್ರೆಗೆ ಮುಳ್ಳು ಬೇಲಿ ಹಾಕಿ ರಕ್ಷಣೆ ನೀಡುವಂತೆ ಅಧಿಕಾರಿಗಳಿಗೆ ಸಂತ್ರಸ್ತೆ” ಮನವಿ ಮಾಡಿದ್ದಾರೆ.