ನ್ಯೂಸ್ ನಾಟೌಟ್:ತೆಲುಗು ಚಿತ್ರರಂಗದ ಖ್ಯಾತ ನಟ ನರೇಶ್ ಅವರು ನಟಿ ಪವಿತ್ರಾ ಲೋಕೇಶ್ ಜತೆ ವಿವಾಹವಾಗಿದ್ದಾರೆ. ಹೌದು, 2022ರಲ್ಲಿ ಬೀದಿ ರಂಪಾಟದೊಂದಿಗೆ ಎಲ್ಲೆಡೆ ಸುದ್ದಿಯಾದ ಈ ಜೋಡಿ ಇದೀಗ ನಿಜವಾಗಿ ಮದುವೆಯಾಗಿ ಸುದ್ದಿಯಾಗಿದ್ದಾರೆ.ಈ ಕುರಿತಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ. ತೆಲುಗು ನಟ ನರೇಶ್ ಹಾಗೂ ಕನ್ನಡ ಮೂಲದ ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಸಂಬಂಧ ಮತ್ತು ಮದುವೆ ವಿಚಾರ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಹೊಸ ವರ್ಷದ ಸಂದರ್ಭದಲ್ಲಿ ನರೇಶ್ ತಮ್ಮ ಮತ್ತು ಪವಿತ್ರರ ರೊಮ್ಯಾಂಟಿಕ್ ವಿಡಿಯೊವನ್ನು ಬಿಡುಗಡೆ ಮಾಡಿದ್ದರು.ಈ ಮೂಲಕ ಅವರ ಅಭಿಮಾನಿಗಳಿಗೆ ಅವರಿಬ್ಬರ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.
ಪವಿತ್ರಾ ಲೋಕೇಶ್ ತಮ್ಮ ಪತಿ ಸುಚೇಂದ್ರ ಪ್ರಸಾದ್ ಹಾಗೂ ಬೆಳೆದು ನಿಂತ ಮಕ್ಕಳನ್ನು ಅರ್ಧದಲ್ಲಿ ಬಿಟ್ಟು ಕಳೆದೊಂದು ವರ್ಷಗಳಿಂದ ನರೇಶ್ ಜೊತೆ ಇದ್ದಾರೆ. ಪವಿತ್ರಾ-ನರೇಶ್ ಮೊದಲು ಲಾಡ್ಜ್ ನಲ್ಲಿ ನರೇಶ್ ಅವರ ಪತ್ನಿಯೆದುರಲ್ಲೇ ಸಿಕ್ಕಿ ಬಿದ್ದಿದ್ದರು. ನರೇಶ್ ಪತ್ನಿ ಪವಿತ್ರಾ ಲೋಕೇಶ್ ಮತ್ತು ನರೇಶ್ ಗೆ ಚಪ್ಪಲಿಯಲ್ಲಿ ಹೊಡೆಯಲು ಹೋಗಿದ್ದರು. ಈ ಘಟನೆಯು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಇದಾದ ನಂತರ ಈ ಜೋಡಿ ಹಲವು ಸಲ ಟೀಕೆಗಳ ಸುಳಿಗೆ ಸಿಲುಕಿತ್ತು. ಎಲ್ಲೆಡೆ ವಿರೋಧ ವ್ಯಕ್ತವಾಗಿದ್ದರೂ ಕೂಡ ಡೋಂಟ್ ಕ್ಯಾರ್ ಎನ್ನುವ ಹಾಗೆ ಬಿಂದಾಸ್ ಆಗಿ ಜತೆಯಲ್ಲೇ ಓಡಾಡುತ್ತಿತ್ತು ಜೋಡಿ.. ಪವಿತ್ರಾಗೆ ಕಿಸ್ ಮಾಡುತ್ತಿರುವ ವಿಡಿಯೋನ ಹೊಸ ವರ್ಷದ ಸಂದರ್ಭದಲ್ಲಿ ನರೇಶ್ ಶೇರ್ ಮಾಡಿಕೊಂಡಿದ್ದರು. ಇದೀಗ ಮದುವೆ ವಿಡಿಯೋ ವೈರಲ್ ಆಗಿದೆ. ಪವಿತ್ರಾ ಲೋಕೇಶ್ ಜೊತೆ ಸಪ್ತಪದಿ ತುಳಿದ ವಿಡಿಯೋನ ನರೇಶ್ ಅವರೇ ಸ್ವತಃ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಆಶೀರ್ವಾದ ಮಾಡುವಂತೆ ಅವರು ಅಭಿಮಾನಿಗಳಲ್ಲಿ ಕೋರಿದ್ದಾರೆ. ಈ ವಿಡಿಯೋಗೆ ಬಗೆಬಗೆಯಲ್ಲಿ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಪವಿತ್ರಾ ಲೋಕೇಶ್ ಹಾಗೂ ನರೇಶ್ ಮಧ್ಯೆ ಪ್ರೀತಿ ಚಿಗುರಿ ಸಾಕಷ್ಟು ಸಮಯ ಕಳೆದಿದೆ. ಈ ವಿಚಾರ ಸಾಕಷ್ಟು ಸುದ್ದಿ ಆಗಿತ್ತು. ಈಗ ಅವರು ಮದುವೆ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅನೇಕರು ನವ ದಂಪತಿಗೆ ಶುಭಾಶಯ ಕೋರಿದ್ದಾರೆ.