ನ್ಯೂಸ್ ನಾಟೌಟ್: ತಾಯಿಯೊಬ್ಬಳು ತನ್ನ ನಾಲ್ಕು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡುವ ನಿರ್ಧಾರಕ್ಕೆ ಬಂದು ಮಕ್ಕಳನ್ನು ಬಾವಿಗೆ ದೂಡಿದ ಬಳಿಕ ತಾಯಿ ಜೀವ ಭಯದಿಂದ ಪರಾದ ಘಟನೆ ಮಧ್ಯ ಪ್ರದೇಶದ ಬುರ್ಹಾನ್ಪುರ ಜಿಲ್ಲೆಯಲ್ಲಿ ಭಾನುವಾರ ( ಮಾ.26 ರಂದು) ನಡೆದಿದೆ.
ಪ್ರಮೀಳಾ ಭಿಲಾಲ (30) ವರ್ಷದ ಮಹಿಳೆ ತನ್ನ ಗಂಡನೊಂದಿಗೆ ಜಗಳಮಾಡಿಕೊಂಡ ಬಳಿಕ ತನ್ನ ನಾಲ್ಕು ಮಕ್ಕಳೊಂಂದಿಗೆ ಆತ್ಮಹತ್ಯೆ ಮಾಡಲು ಮನೆಯಿಂದ ಹೊರಗೆ ತೆರಳಿದ್ದಾಳೆ. ತನ್ನ 18 ತಿಂಗಳ ಮಗು ಸಹಿತ ನಾಲ್ವರು ಮಕ್ಕಳ ಜೊತೆ ಮನೆಯ ಪಕ್ಕದ ಬಾವಿಗೆ ಕರೆದುಕೊಂಡು ಹೋಗಿ ಬಾವಿಗೆ ಹಾರಿದ್ದಾಳೆ ಎಂದು ವರದಿ ತಿಳಿಸಿದೆ.
ಮೊದಲು ಮಕ್ಕಳನ್ನು ಬಾವಿಗೆ ದೂಡಿ ಬಳಿಕ ತಾವೂ ಬಾವಿಗೆ ಹಾರಿದ್ದಾಳೆ. ಆದರೆ ಈ ವೇಳೆ ಜೀವಭಯದಿಂದ ಹಗ್ಗ ಹಿಡಿದುಕೊಂಡು ತನ್ನ 7 ವರ್ಷದ ಹಿರಿಯ ಮಗಳನ್ನು ಹಿಡಿದುಕೊಂಡು ಮೇಲಕ್ಕೆ ಬಂದಿದ್ದಾರೆ. ಇನ್ನುಳಿದ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಬುರ್ಹಾನ್ಪುರ ಜಿಲ್ಲೆಯಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಬಾಲ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 18 ತಿಂಗಳ ಗಂಡು ಮಗು, ಮೂರು ಹಾಗೂ ಐದು ವರ್ಷದ ಹೆಣ್ಣು ಮಗು ಮೃತಪಟ್ಟಿವೆ ಎಂದು ವರದಿ ತಿಳಿಸಿದೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.