ನ್ಯೂಸ್ ನಾಟೌಟ್: ಭಾರತೀಯ ಸೇನಾ ಯೋಧನೊಬ್ಬ ತನ್ನ ಸಂಗಾತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಸೇನಾಧಿಕಾರಿಯ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಮಾರ್ಚ್ 13 ರಂದು ವರದಿಯಾಗಿದೆ.
ಸೇನಾಧಿಕಾರಿಯ ಪತ್ನಿ ಸುದೇಷ್ಣಾ ಅವರ ಹತ್ಯೆಗೆ ಸಂಬಂಧಿಸಿದಂತೆ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ ಮೊದಲು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಭಾಟಿ ತಿಳಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಪೊಲೀಸ್ ಸಿಬ್ಬಂದಿ ಕೊಲೆ ನಡೆದ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ, ಆ ವಿಡಿಯೋ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಸೇನಾಧಿಕಾರಿಗಳ ನೆರವಿನೊಂದಿಗೆ ಸೇನಾ ಯೋಧನನ್ನು ಬಂಧಿಸಿದ್ದಾರೆ.
ಸೇನಾಧಿಕಾರಿಯೊಂದಿಗೆ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ತಿಳಿದ ನಿತೀಶ್ ಪಾಂಡೆ ಕೋಪಗೊಂಡು, ಸೇನಾಧಿಕಾರಿಯ ಮನೆಗೆ ಹೋದರು ಮತ್ತು ಅಲ್ಲಿ ಅವರ ಪತ್ನಿ ಸುದೇಷ್ನಾಳನ್ನು ಆರೋಪಿಗೆ ಕಾಣ ಸಿಗುತ್ತಾರೆ, ಕೊಲೆ ಆರೋಪಿ ಪತಿಗೆ ಕರೆ ಮಾಡಿ ತನ್ನ ಪತ್ನಿಯ ಚಿತ್ರಗಳು ಮತ್ತು ವೀಡಿಯೊಗಳನ್ನು ಅಳಿಸಲು ಹೇಳುವಂತೆ ಸುದೇಷ್ಣಾ ಬಳಿ ಕೇಳಿದರು. ಇದರಿಂದ ಕೋಪಗೊಂಡ ಸುದೇಷ್ಣಾ ವಾಗ್ವಾದಕ್ಕೆ ಮುಂದಾದಳು.
ವಾಗ್ವಾದದ ವೇಳೆ ಪಾಂಡೆ ಸುದೇಷ್ನಾಳ ಮೇಲೆ ಹಲ್ಲೆ ನಡೆಸಿದರು. ಬಂಧಿತ ಸೇನಾ ಜವಾನ ತನ್ನ ಸಹೋದ್ಯೋಗಿಯ ಪತ್ನಿಯ ಕುತ್ತಿಗೆ ಮತ್ತು ದೇಹದ ಇತರ ಭಾಗಗಳ ಮೇಲೆ ಪದೇ ಪದೇ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಸೇನಾ ಯೋಧನನ್ನು ಬರೇಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.