ನ್ಯೂಸ್ ನಾಟೌಟ್: ಮದುವೆಯಾಗಿ ಗಂಡನ ಮನೆಗೆ ಹೋಗುವ ಮಾರ್ಗ ಮಧ್ಯ ಕಾರಿನಿಂದ ಇಳಿದು ಅಮ್ಮನ ಮನೆಗೆ ಹೋಗುವುದಾಗಿ ಹಠ ಮಾಡಿ ಮದುವೆ ಮುರಿದುಕೊಂಡ ಘಟನೆ ವಾರಣಾಸಿಯ ಕಾನ್ಪುರದಲ್ಲಿ ಮಾರ್ಚ್ ೧೮ ರಂದು ನಡೆದಿದೆ.
ರಾಜಸ್ಥಾನದ ಬಿಕನೇರ್ ನಿವಾಸಿಯಾಗಿರುವ ರವಿ ಎಂಬ ಯುವಕನಿಗೆ ಈ ಯುವತಿಯನ್ನು ನಿಶ್ಚಯವಾಗಿ ಮದುವೆಯೂ ಆಗಿತ್ತು. ಆದರೆ ಮದುವೆಗೂ ಮುನ್ನ ಆತ ಯುವತಿಯೊಂದಿಗೆ ತನ್ನ ಹುಟ್ಟೂರು ಉತ್ತರಪ್ರದೇಶ ಪ್ರಯಾಗ್ ರಾಜ್ ಎಂದು ಹೇಳಿದ್ದ ಎನ್ನಲಾಗಿದೆ. ಮದುವೆಯಾಗಿ ಪತಿಯೊಂದಿಗೆ ಪ್ರಯಾಗ್ರಾಜ್ಗೆ ಪ್ರಯಾಣಿಸಿದ ಹೆಂಡತಿಗೆ ಆ ಬಳಿಕ ಅನುಮಾನ ಮೂಡಿದ್ದು, ಕಾರಣ 7 ಗಂಟೆ ಪ್ರಯಾಣಿಸಿದರು ರಾಜಸ್ತಾನ ತಲುಪುತ್ತಿಲ್ಲ. ಬಳಿಕ ಪತಿ ನನ್ನ ಬಳಿ ಸುಳ್ಳು ಹೇಳಿದ್ದು, ಆತ ಉತ್ತರ ಪ್ರದೇಶಕ್ಕೆ ಸೇರಿದವನಲ್ಲ ಎಂದು ಗೊತ್ತಾಗಿದೆ.
ಆತ ಸುಳ್ಳು ಹೇಳಿರುವುದು ಖಚಿತವಾಗುತ್ತಿದ್ದಂತೆ ಪತ್ನಿ ವಾರಣಾಸಿ-ಕಾನ್ಪುರ ರಸ್ತೆಯಲ್ಲಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ಈ ವೇಳೆ ತನ್ನನ್ನು ಬಲವಂತಾಗಿ ಕರೆದುಕೊಂಡು ಹೋಗುತ್ತಿರುವುದಾಗಿ ಪೊಲೀಸರ ಬಳಿ ದೂರು ನೀಡಿದ್ದಾಳೆ. ನಂತರ ಪೊಲೀಸರು ಎಲ್ಲರನ್ನು ವಿಚಾರಣೆ ನಡೆಸಿ ಆಕೆಯನ್ನು ವಿಚಾರಿಸಿದಾಗ ಆಕೆ ಗಂಡನ ಮನೆಯವರು ವಿವಾಹದ ಸಂದರ್ಭದಲ್ಲಿ ಅಲಹಾಬಾದ್ನಲ್ಲಿ ಇರುತ್ತೇನೆ ಎಂದಿದ್ದರು, ಇದೀಗ ರಾಜಸ್ತಾನದ ಬಿಕಾನೇರ್ಗೆ ಕರೆದುಕೊಂಡು ಹೋಗುತ್ತಿದ್ದಾರೆ. ನಾನು ಮನೆಯಿಂದ ತುಂಬ ದೂರ ಹೋಗಲು ಬಯಸುವುದಿಲ್ಲ. ನಾನು ನನ್ನ ತಂದೆ ತಾಯಿಯ ಹತ್ತಿರ ಇರಲು ಬಯಸುತ್ತೇನೆ, ಈ ಮದುವೆಯನ್ನು ಮುರಿದುಕೊಳ್ಳುತ್ತೇನೆ ಎಂದು ಹೇಳಿದ್ದಾಳೆ.
ದೂರು ಸ್ವೀಕರಿಸಿದ ಪೊಲೀಸರು ಎಲ್ಲರನ್ನು ಮಹಾರಾಜಪುರ ಠಾಣೆಗೆ ಕರೆದುಕೊಂಡು ಹೋಗಿ ವಧುವಿನ ತಾಯಿಯ ಬಳಿ ಚರ್ಚಿಸಿದ್ದಾರೆ.
“ನನಗೆ ಗಂಡನಿಲ್ಲ. ನಮ್ಮ ಸಂಬಂಧಿಕರೊಬ್ಬರು ಈ ಮದುವೆ ನಿಶ್ಚಯ ಮಾಡಿದ್ದರು. ಆ ಹುಡುಗ ಅಲಹಬಾದ್ನವನು ಎಂಬುದು ಮಾತ್ರ ನಮಗೆ ಗೊತ್ತಿತ್ತು. ನನ್ನ ಮಗಳು ಬಿಕಾನೇರ್ಗೆ ಹೋಗಲು ಬಯಸದಿದ್ದರೆ, ಅವಳನ್ನ ನನ್ನ ಮನೆಗೆ ಕಳುಹಿಸಿ. ನಾವು ಮದುವೆಯನ್ನು ಮುರಿದುಕೊಳ್ಳುತ್ತೇವೆ ” ಎಂದು ವಧುವಿನ ತಾಯಿ ಹೇಳಿದ್ದಾರೆ. ಈ ಕಾರಣದಿಂದ ಮದುವೆ ಮುರಿದು ಬಿದ್ದಿದ್ದು ವರ ತನ್ನ ಹುಟ್ಟೂರಿಗೆ ಮರಳಿದ್ದಾನೆ ಎಮದು ವರದಿ ತಿಳಿಸಿದೆ.