ನ್ಯೂಸ್ ನಾಟೌಟ್: ತಾಯಿಯ ಪ್ರೀತಿಗೆ ಯಾವುದೇ ಮಿತಿಯಿಲ್ಲ, ಮತ್ತು ಈ ವೈರಲ್ ವೀಡಿಯೊ ಅದಕ್ಕೆ ಸ್ಪಷ್ಟ ಉದಾಹರಣೆ ಎಂಬಂತಿದೆ. ಚಿಂಪಾಂಜಿಯ ತಾಯಿ ತನ್ನ ಮಗುವನ್ನು ವೈದ್ಯಕೀಯ ಚಿಕಿತ್ಸೆಗಾಗಿ ತಾಯಿಯಿಂದ ಬೇರ್ಪಡಿಸಿ ಕೊಂಡುಹೋದ ಬಳಿಕ ನಡೆದ ಹೃದಯವಿದ್ರಾವಕ ಕ್ಷಣವನ್ನು ಈ ವಿಡಿಯೋ ತುಣುಕಿನಲ್ಲಿ ಸೆರೆಹಿಡಿಯಲಾಗಿದೆ. ಚಿಕಿತ್ಸೆ ಮುಗಿಸಿ ತಂದ ಮೇಲೆ ತನ್ನ ಪುಟ್ಟ ಮಗು ಸತ್ತಿದೆ ಎಂದು ಭಾವಿಸಿ ಚಿಂಪಿನ ತಾಯಿ ತೀವ್ರವಾಗಿ ರೋಧಿಸುತ್ತದೆ.
ಯುಎಸ್ನ ಕಾನ್ಸಾಸ್ನ ಸೆಡ್ಗ್ವಿಕ್ ಕೌಂಟಿ ಮೃಗಾಲಯದ ಪಶುವೈದ್ಯರು ಆಮ್ಲಜನಕ ಮಟ್ಟದ ಕೊರತೆಯಿಂದಾಗಿ ಮರಿ ಚಿಂಪಾಂಜಿಯನ್ನು ಚಿಕಿತ್ಸೆಗಾಗಿ ಕರೆದೊಯ್ದಿದ್ದರು, ಸುಮಾರು 48 ಗಂಟೆಗಳ ನಂತರ, ಮಗುವನ್ನು ತಾಯಿಯ ಬಳಿಗೆ ತರಲಾಯಿತು ಮತ್ತು ನಂತರ ನಡೆದದ್ದು ನಿಜವಾಗಿಯೂ ಹೃದಯಸ್ಪರ್ಶಿಯಾಗಿದೆ. ತನ್ನ ಮಗು ಸತ್ತಿದೆ ಎಂದು ಭಾವಿಸಿದ್ದ ಚಿಂಪಾಂಜಿಗೆ ಮತ್ತೆ ಮಗುವಿನ ಚಲನೆ ಕಂಡು ತನ್ನ ಸಂತೋಷವನ್ನು ತಡೆಯಲು ಸಾಧ್ಯವಾಗಲಿಲ್ಲ, ತಾಯಿಯ ಪ್ರೀತಿ ಮತ್ತು ವಾತ್ಸಲ್ಯದಿಂದ ತನ್ನ ಮಗುವನ್ನು ಅಪ್ಪಿಕೊಂಡು ಮುದ್ದಾಡುವ ದೃಶ್ಯವಂತು ಎಂತವರನ್ನೂ ಮೂಕವಿಸ್ಮಿತರನ್ನಾಗಿಸುತ್ತದೆ.
ಪ್ರಾಣಿಗಳು, ಮನುಷ್ಯರಂತೆ ಭಾವನೆಗಳನ್ನು ಹೊಂದಿವೆ ಎಂಬುದನ್ನು ಇದು ನೆನಪಿಸುತ್ತದೆ. ಪ್ರಾಣಿಗಳಿಗೂ ಕುಟುಂಬ, ಸಂಬಂಧಗಳನ್ನು ಹೊಂದಿವೆ ಎಂಬುದಕ್ಕೆ ಇದು ಉದಾಹರಣೆಯಂತಿದೆ.