ನ್ಯೂಸ್ ನಾಟೌಟ್: ನಾಲ್ಕು ತಿಂಗಳ ಹೆಣ್ಣು ಮಗುವನ್ನು ತಾಯಿಯೇ ಕೊಂದ ಘಟನೆ ನಾಸಿಕ್ನ ಗಂಗಾಪುರ ರಸ್ತೆಯ ಧ್ರುವ ನಗರದಲ್ಲಿ ಸೋಮವಾರ ನಡೆದಿದೆ.
ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದು, ಆಘಾತಕಾರಿ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಮಗುವಿನ ತಾಯಿಯೇ ಕತ್ತು ಕೊಯ್ದು ಕೊಂದಿದ್ದಾಳೆ ಎಂದು ಪೊಲೀಸ್ ತನಿಖೆಯಿಂದ ತಿಳಿದಿದ್ದು, ಇದಕ್ಕೆ ಕಾರಣವನ್ನೂ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ ಎನ್ನಲಾಗಿದೆ.
ಧ್ರುವಂಶಿ ಭೂಷಣ್ ರೋಕಡೆ ಎಂಬ 4 ತಿಂಗಳ ಮಗು ಕೊಲೆಯಾಗಿದ್ದು, ಆಕೆಯ ತಂದೆ ಭೂಷಣ್ ರೋಕಡೆ ಸಾತ್ಪುರದ ಕಂಪನಿಯೊಂದರಲ್ಲಿ ಮೇಲ್ವಿಚಾರಕರಾಗಿ ದುಡಿಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಆರೋಪಿ ಮಹಿಳೆ ಪೊಲೀಸರಿಗೆ ಆರಂಭದಲ್ಲಿ ಬೇರೆಯೇ ಕಥೆ ಹೇಳಿ ತನಿಖೆಯ ದಾರಿ ತಪ್ಪಿಸಿದ್ದಾಳೆ. ಆರಂಭದಲ್ಲಿ ಬಂದಿರುವ ಮಾಹಿತಿ ಪ್ರಕಾರ ಸೋಮವಾರ ಮಾರ್ಚ್ 20 ರಂದು ಎಂದಿನಂತೆ ಭೂಷಣ್ ಕೆಲಸಕ್ಕೆ ತೆರಳಿದಾಗ ತಾಯಿ ಹಾಗೂ ಪತ್ನಿ ಇಬ್ಬರೂ ಮನೆಯಲ್ಲಿದ್ದರು. ಸಂಜೆ ಭೂಷಣ್ ಅವರ ತಾಯಿ ಹಾಲು ತಂದು ಮಗುವಿಗೆ ಕುಡಿಸಲು ಬಂದಿದ್ದಾರೆ.
ಆ ವೇಳೆ ಧ್ರುವ ಜತೆ ಭೂಷಣ್ ಅವರ ಪತ್ನಿ ಹಾಗೂ ಪುಟ್ಟ ಮಗು ಮನೆಯಲ್ಲಿದ್ದರು. ಅಷ್ಟರಲ್ಲಿ ಪಂಜಾಬಿ ಡ್ರೆಸ್ ಧರಿಸಿದ್ದ ಅಪರಿಚಿತ ಮಹಿಳೆಯೊಬ್ಬರು ಏಕಾಏಕಿ ಮನೆಯೊಳಗೆ ಪ್ರವೇಶಿಸಿ ೪ ತಿಂಗಳ ಮಗು ಮತ್ತು ಆಕೆಯ ತಾಯಿಯ ಮೂಗಿಗೆ ಬಟ್ಟೆ ತುರುಕಿ ಮಗುವಿನ ಕತ್ತು ಸೀಳಿ ಹೋಗಿದ್ದಾಳೆ ಎಂದು ಆಕೆ ಹೇಳಿದ್ದಳು ಎಂದು ವರದಿಯಾಗಿದೆ.
ಭೂಷನ್ ಅವರ ತಾಯಿ ಹೇಳುವ ಪ್ರಕಾರ, ಸ್ವಲ್ಪ ಸಮಯದ ನಂತರ, ಭೂಷಣ್ ಅವರ ತಾಯಿ ಹಾಲಿನೊಂದಿಗೆ ಮನೆಗೆ ಬಂದರು, ಆ ಸಮಯದಲ್ಲಿ ಅವರು ತಮ್ಮ ಸೊಸೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಂತೆ ಬಿದ್ದಿರುವುದನ್ನು ಕಾಣುತ್ತಾರೆ. ಆ ವೇಳೆಗೆ 5 ತಿಂಗಳ ಮೊಮ್ಮಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದಳು ಎಂದಿದ್ದಾರೆ. ಈ ಸಂಬಂಧ ನಾಸಿಕ್ನ ಗಂಗಾಪುರ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದರೆ ಪೊಲೀಸ್ ತನಿಖೆಯ ನಂತರ ಸತ್ಯಾಂಶ ಬೆಳಕಿಗೆ ಬಂದಿದೆ. ಧ್ರುವಂಶಿ ರೋಕಡೆ ಅವರ ನಾಲ್ಕು ತಿಂಗಳ ಮಗುವನ್ನು ಆಕೆಯ ಸ್ವಂತ ತಾಯಿಯೇ ಕೊಂದಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಈ ವೇಳೆ ಪೊಲೀಸರು ಮಹಿಳೆಯ ವಿಚಾರಣೆ ನಡೆಸಿದ್ದಾರೆ. ಕೊಲೆಗೆ ಕಾರಣವನ್ನೂ ಹೇಳಿದ್ದಾಳೆ. “ಮಗು ತಂದೆಯಂತೆ ಕಾಣುತ್ತದೆ ಎಂದು ಸಂಬಂಧಿಕರು ಹೇಳುತ್ತಿದ್ದರು, ಇದರಿಂದಾಗಿ ಖಿನ್ನತೆಗೆ ಒಳಗಾಗಿದ್ದೆ ಆದ್ದರಿಂದ ಹೀಗೆ ಮಾಡಿದ್ದೇನೆ” ಎಂದು ಮಗುವಿನ ತಾಯಿ ಹೇಳಿಕೊಂಡಿದ್ದಾಳೆ.
ಸೋಮವಾರ (ಮಾರ್ಚ್ 20) ರಾತ್ರಿ ಅತ್ತೆ ಮತ್ತು ಆಕೆಯ ಗಂಡ ಹೊರ ಹೋಗಿದ್ದಾಗ ವೇಳೆ ಮಗು ಧ್ರುವಂಶಿ ಮಲಗಿದ್ದಾಗ ಚಾಕುವಿನಿಂದ ಕತ್ತು ಕೊಯ್ದಿದ್ದಾಳೆ. ಅದರ ನಂತರ, ಚಾಕುವನ್ನು ತೊಳೆದು ಮೊದಲಿನ ಸ್ಥಳದಲ್ಲೆ ಇಟ್ಟಿದ್ದಾಳೆ. ನಂತರ ಮಹಿಳೆಯೊಬ್ಬರು ನನ್ನನ್ನು ಕರವಸ್ತ್ರದಿಂದ ಪ್ರಜ್ಞೆ ತಪ್ಪಿಸಿ ಮಗುವನ್ನು ಕೊಂದಿದ್ದಾರೆ ಎಂದು ನಟಿಸಿದ್ದಾಳೆ ಎಂದು ತಿಳಿದುಬಂದಿದೆ. ಈ ವೇಳೆ ಪೊಲೀಸರು ತಾಯಿ ಯುಕ್ತಾ ಭೂಷಣ್ ರೊಕ್ಡೆ ಅವರನ್ನು ಬಂಧಿಸಿದ್ದಾರೆ.