ನ್ಯೂಸ್ನಾಟೌಟ್: ಇತ್ತೀಚಿನ ದಿನಗಳಲ್ಲಿ ಮೊಬೈಲ್ ರಿಲ್ಸ್ ಗಾಗಿ ಏನು ಬೇಕಿದ್ದರೂ ಮಾಡುವ ಕೆಲ ಯುವಜನತೆ, ಅಲ್ಲಿನ ಪಾರಂಪರಿಕ ಮೌಲ್ಯ, ಸಂರಕ್ಷಣೆಯ ಹೊಣೆ ಮತ್ತು ಭಾವನಾತ್ಮಕವಾಗಿ ಆಗುವ ಹಾನಿಗಳನ್ನು ಮರೆತು ವರ್ತಿಸುತ್ತಾರೆ. ಅಂತಹದ್ದೇ ಬೇಜವಬ್ದಾರಿಯುತ ಘಟನೆ ಕರ್ನಾಟಕದ ಐತಿಹಾಸಿಕ ಸ್ಮಾರಕ ಹಂಪಿಯಲ್ಲಿ ನಡೆದಿದೆ.
ಹಂಪಿಯ ಹೇಮಕೂಟ ಮೇಲೆ ಹತ್ತಿ ಡಾನ್ಸ್ ಮಾಡಿ ಅದರ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಯುವಕನ ವಿರುದ್ಧ ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಯುವಕನೋರ್ವ ಸ್ಮಾರಕದ ಮಂಟಪಕ್ಕೆ ಹತ್ತಿ ಡಾನ್ಸ್ ಮಾಡಿರುವ ದೃಶ್ಯವನ್ನು ಇನ್ಸ್ಟಾಗ್ರಾಂನ ‘ರೀಲ್ಸ್’ ನಲ್ಲಿ ಅಪ್ ಲೋಟ್ ಮಾಡಿದ್ದ. ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿತ್ತು.
ಈ ಸಂಬಂಧ ಆತನ ವಿರುದ್ಧ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ (ಎಎಸ್ಐ) ಅಧಿಕಾರಿಗಳು ಮಂಗಳವಾರ ಫೆ.೨೮ರಂದು ಹಂಪಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ವಿಡಿಯೋ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.