ನ್ಯೂಸ್ ನಾಟೌಟ್: ಲೈಂಗಿಕ ಕಿರುಕುಳದ ದೂರಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕವೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಹೆದರಿದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೊರಾದಾಬಾದ್ ನಲ್ಲಿ ಮಾರ್ಚ್ 22 ರಂದು ನಡೆದಿದೆ
ಅಪ್ರಾಪ್ತರೊಬ್ಬರು ದಾಖಲಿಸಿರುವ ಕಿರುಕುಳ ಪ್ರಕರಣದ ಬಗ್ಗೆ ಪೊಲೀಸರ ನಿರಾಸಕ್ತಿಯ ಕಾರಣದಿಂದಾಗ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಮೊರಾದಾಬಾದ್ ವರದಿಯಾಗಿದ್ದು. ಪುರುಷರ ಗುಂಪೊಂದು ಲೈಂಗಿಕವಾಗಿ ಕಿರುಕುಳ ನೀಡಿದ್ದಕ್ಕೆ ಹೆದರಿ ಶಾಲೆಗೆ ಹೋಗುವುದನ್ನು ನಿಲ್ಲಿಸಿದ 17 ವರ್ಷದ ಶಾಲಾ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
12 ನೇ ತರಗತಿಯ ಬಾಲಕಿ ಭಾನುವಾರದಂದು ಆತ್ಮಹತ್ಯೆಗೆ ನಿರ್ಧರಿಸುವ ಕೆಲವು ದಿನಗಳ ಮೊದಲು ಕಿರುಕುಳ ನೀಡಿದ್ದ ಗುಂಪಿನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು. ನಂತರ ಸ್ಥಳೀಯ ಪೊಲೀಸ್ ಠಾಣೆಯಿಂದ ತನಗೆ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿ ಬಾಲಕಿ ಡೆತ್ ನೋಟ್ ಬರೆದಿಟ್ಟಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬಾಲಕಿಯ ಮನೆಯವರ ಪ್ರಕಾರ, ಆಕೆಯ ಮನೆಯ ಸಮೀಪ ಪುರುಷರ ಗುಂಪೊಂದು ಆಕೆಗೆ ಕಿರುಕುಳ ನೀಡಿತ್ತು. ಈ ಗುಂಪು ಅವಳ ಕೆಲವು ಸಹಪಾಠಿಗಳಿಗೆ ಪರಿಚಯವಿದೆ, ಈ ವಿಷಯವನ್ನು ಆಕೆಯ ಪೋಷಕರ ಗಮನಕ್ಕೆ ತಂದಾಗ, ಅವರು ಮಾರ್ಚ್ 8 ರಂದು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಮೊರಾದಾಬಾದ್ ನ ಎಸ್ಎಸ್ಪಿ ಹೇಮರಾಜ್ ಮೀನಾ ಪೊಲೀಸ್ ತನಿಖೆ ನಡೆಯುತ್ತಿದೆ ಮತ್ತು ಮೂವರು ಆರೊಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಹೇಳಿದರು. ಬಾಲಕಿಯ ಕುಟುಂಬದಿಂದ ದೂರು ಸ್ವೀಕರಿಸಿದ ನಂತರ ಅಸಡ್ಡೆ ತೋರಿದ ಸಬ್ ಇನ್ಸ್ಪೆಕ್ಟರ್ನನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.