ನ್ಯೂಸ್ ನಾಟೌಟ್: ವರದಕ್ಷಿಣೆಗಾಗಿ ಪತಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಪೊಲೀಸ್ ಪೇದೆಯಾಗಿದ್ದ ಕೆ.ಅವಿನಾಶ್ ಅವರ ಪತ್ನಿ ಕೆ.ಪವಿತ್ರಾ ಹೈದರಾಬಾದ್ ಮಲಕ್ಪೇಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಸೋಮವಾರ ನಡೆದಿದೆ.
2010ರ ಬ್ಯಾಚ್ನ ಕಾನ್ಸ್ಟೇಬಲ್ ಆಗಿರುವ ಅವಿನಾಶ್ ಪ್ರಸ್ತುತ ಹೈದರಾಬಾದ್ ನಗರದ ಕಾಲಾಪತ್ತರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈತನ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಪತ್ನಿಯ ಸಾವಿಗೆ ಕಾರಣ ಎಂದು ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ ಗೆ ಕಳುಹಿಸಲಾಗುವುದು ಎಂದು ಮಲಕಪೇಟೆ ಇನ್ಸ್ ಪೆಕ್ಟರ್ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ದಂಪತಿಗಳು ಮೊದಲು ಒಳ್ಳೆಯ ಸಂಬಂಧ ಹೊಂದಿದ್ದರು ಮತ್ತು 2016 ರಲ್ಲಿ ವಿವಾಹವಾದ ಇವರು, ಐದೂವರೆ ವರ್ಷದ ಮಗಳನ್ನು ಸಹ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ. ಅವಿನಾಶ್ ಕುಡಿತದ ಚಟಕ್ಕೆ ಬಿದ್ದಿದ್ದು, ಪವಿತ್ರಾ ಅವರಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಲ್ಲದೆ ಹೆಚ್ಚುವರಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಚಿತ್ರಹಿಂಸೆಯನ್ನು ಸಹಿಸಲಾಗದೆ, ಅವಳು ಮಹಿಳಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದರು, ಅಲ್ಲಿ ಅವನನ್ನು ಕರೆಸಲಾಯಿತು ಮತ್ತು ಅವನಿಗೆ ಸರಿದಾರಿಯಲ್ಲಿ ನಡೆಯುವಂತೆ ಸಲಹೆ ನೀಡಲಾಗಿತ್ತು, ಆದರೆ ಅವನು ಬದಲಾಗಲಿಲ್ಲ ಮತ್ತು ಅವಳಿಗೆ ಕಿರುಕುಳ ನೀಡುವುದನ್ನು ಮತ್ತಷ್ಟು ಹೆಚ್ಚು ಮಾಡಿದ್ದ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಇದರಿಂದ ಮನನೊಂದ ಆಕೆ ಸೋಮವಾರ ಮಾರ್ಚ್ ೨೦ರಂದು ತಡರಾತ್ರಿ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅವಿನಾಶ್ ತನಗೆ ಹೇಗೆ ಕಿರುಕುಳ ನೀಡುತ್ತಿದ್ದ ಎನ್ನುವುದನ್ನು ಪವಿತ್ರ ತನ್ನ ‘ಡೆತ್ ನೋಟ್’ ನಲ್ಲಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.