ನ್ಯೂಸ್ ನಾಟೌಟ್: ಮಿಜೋರಾಂನ ಕೊಲಾಸಿಬ್ ಜಿಲ್ಲೆಯಲ್ಲಿ ಪೊಲೀಸರು ತನ್ನ ಇಬ್ಬರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಕೊಂದ ಆಘಾತಕಾರಿ ಘಟನೆ ನಡೆದಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ಮಾರ್ಚ್ ೧೩ರಂದು ತಿಳಿಸಿದ್ದಾರೆ.
ಮಿಜೋರಾಂ-ಅಸ್ಸಾಂ ಗಡಿ ಸಮೀಪದ ಬುರ್ಚೆಪ್ ಗ್ರಾಮದ ಉಪ-ಠಾಣೆಯಲ್ಲಿ ಸಶಸ್ತ್ರ ಪಡೆಯ ಎರಡನೇ ಬೆಟಾಲಿಯನ್ನ ಮೂವರು ಪೊಲೀಸರು ಇದ್ದ ವೇಳೆ ಭಾನುವಾರ ಸಂಜೆ ಈ ಘಟನೆ ನಡೆದಿದೆಎಂದು ವರದಿ ತಿಳಿಸಿದೆ.
ಆರೋಪಿಗಳಾದ 56 ವರ್ಷದ ಹವಾಲ್ದಾರ್ ಬಿಮಲ್ ಕಾಂತಿ ಚಕ್ಮಾ, ತನ್ನ ವರ್ತನೆಯ ಬಗ್ಗೆ ದೂರು ನೀಡಿದ್ದ ಸಹುದ್ಯೋಗಿಗಳ ಬಗ್ಗೆ ಕೋಪಗೊಂಡು ಇಬ್ಬರು ಪೊಲೀಸರ ಮೇಲೆ ತನ್ನ ಸರ್ವಿಸ್ ರೈಫಲ್ನಿಂದ ಕನಿಷ್ಠ 15 ಸುತ್ತು ಗುಂಡು ಹಾರಿಸಿದ ಘಟನೆ ನಡೆದಿರುವುದಾಗಿ ಮಿಜೋರಾಂ ಪೊಲೀಸ್ ಮಹಾನಿರೀಕ್ಷಕ ಲಾಲ್ಬಿಯಕ್ತಂಗ ಖಿಯಾಂಗ್ಟೆ ಮಾಹಿತಿ ನೀಡಿದ್ದಾರೆ.
ಮೃತರನ್ನು ಹವಾಲ್ದಾರ್ ಜೆ ಲಾಲ್ರೋಹ್ಲುವಾ ಮತ್ತು ಹವಾಲ್ದಾರ್ ಇಂದ್ರಕುಮಾರ್ ರೈ ಎಂದು ಗುರುತಿಸಲಾಗಿದ್ದು, ಭಾರಿ ಗುಂಡಿನ ಶಬ್ದಗಳನ್ನು ಕೇಳಿದ ಗಡಿಯ ಔಟ್ಪೋಸ್ಟ್ ಕಮಾಂಡರ್ ಮತ್ತು ಇತರ ಪೊಲೀಸ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದಾಗ ಲಾಲ್ರೊಹ್ಲುವಾ ನೆಲದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡರು, ಉಳಿದವರು ಒಬ್ಬರು ತೀವ್ರವಾಗಿ ಗಾಯಗೊಂಡಿದ್ದರು.
ಚಕ್ಮಾನನ್ನು ಬಂಧಿಸಲಾಗಿದ್ದು, ಆತನ ಬಳಿಯಿದ್ದ ಮದ್ದುಗುಂಡುಗಳ ಜೊತೆಗೆ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಜಿಪಿ ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಆರೋಪಿಯು ತಾನು ಮದ್ಯವ್ಯಸನಿ ಎಂದು ಒಪ್ಪಿಕೊಂಡಿದ್ದಾನೆ ಮತ್ತು ಅವನ ಸಹೋದ್ಯೋಗಿಗಳು ಅವರ ವರ್ತನೆಯ ಬಗ್ಗೆ ತಮ್ಮ ಔಟ್ಪೋಸ್ಟ್ ಕಮಾಂಡರ್ಗೆ ಪದೇ ಪದೇ ವರದಿ ಮಾಡಿದ್ದಾರೆ ಎಂದು ಆತ ದ್ವೇಷ ಇಟ್ಟುಕೊಂಡಿದ್ದ ಎನ್ನಲಾಗಿದೆ.