ನ್ಯೂಸ್ ನಾಟೌಟ್: ಭೂ ಕಬಳಿಕೆ ವಿಚಾರವಾಗಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಸಾರಾ ಮಹೇಶ್ ಅವರ ಜಟಾಪಟಿ ರಾಜ್ಯಾದ್ಯಂತ ಸದ್ದು ಮಾಡಿತ್ತು. ಸದ್ಯ ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಐಪಿಎಸ್ ಅಧಿಕಾರಿ ಡಿ. ರೂಪಾ ಗುಡುಗಿದ್ದಾರೆ. ರೋಹಿಣಿ ಸಿಂಧೂರಿ ನಡೆ ವಿರುದ್ದ ಮಹಿಳಾ ಐಎಎಸ್ ಅಧಿಕಾರಿ ಡಿ. ರೂಪಾ ಮೌದ್ಗೀಲ್ ವರು ಕಿಡಿಕಾರಿದ್ದಾರೆ.
ಈಗ ಐಎಎಸ್ ರೋಹಿಣಿ ಸಿಂಧೂರಿ ಅವರು ಪ್ರತಿಭಟಿಸಬಹುದಾದ ಫೋಟೋಗಳನ್ನ ತಮ್ಮ ಫೇಸ್ಬುಕ್ ಅಕೌಂಟ್ ನಲ್ಲಿ ಹಂಚಿಕೊಂಡಿರುವ ಐಪಿಎಸ್ ಅಧಿಕಾರಿ ಡಿ. ರೂಪಾರವರು ರೋಚಕ ಟ್ವಿಸ್ಟ್ ಕೊಟ್ಟಿದ್ದಾರೆ. ಈ ಫೋಟೋಗಳ ಹಿಂದಿರುವ ನಿಜವಾದ ಮುಖವನ್ನು ಯಾವುದೇ ತನಿಖಾ ಸಂಸ್ಥೆ ಕೂಡ ತನಿಖೆ ಮಾಡಬಹುದು ಎಂದು ರೂಪಾ ಸವಾಲು ಹಾಕಿದ್ದಾರೆ.
” ಈ ರೀತಿಯ ಪಿಕ್ಚರ್ಸ್ ನಾರ್ಮಲ್ ಅನಿಸಬಹುದು. ಆದರೆ, ಒಬ್ಬ ಮಹಿಳಾ ಐಎಎಸ್ ಅಧಿಕಾರಿ ಒಂದಲ್ಲ, ಎರಡಲ್ಲ ಮೂರು ಐಎಎಸ್ ಪುರುಷ ಅಧಿಕಾರಿಗಳಿಗೆ ಇಂತಹ ಹಾಗೂ ಈ ರೀತಿಯ ಅನೇಕ ಚಿತ್ರಗಳು ಒಂದಾದ ಮೇಲೆ ಒಂದರಂತೆ ಕಳಿಸ್ತಾರೆ ಅಂದ್ರೆ ಏನರ್ಥ? ಇದು ಆಕೆಯ ಖಾಸಗಿ ವಿಚಾರ ಆಗುವುದಿಲ್ಲ. ಐಎಎಸ್ ಸೇನಾ ನಿಯಮಗಳ ಪ್ರಕಾರ ಅಪರಾಧ. ಈ ಚಿತ್ರಗಳ ನೈಜತೆ ಬಗ್ಗೆ ಯಾವುದೇ ತನಿಖಾ ಸಂಸ್ಥೆ ಕೂಡಾ ತನಿಖೆ ಮಾಡಬಹುದು. ಸಲೂನ್ ಹೇರ್ಕಟ್, ಹೇರ್ಕಟ್ ಫೋಟೋ, ತಲೆದಿಂಬು ಇಟ್ಟು ಮಲಗಿ ತೆಗೆದಿರುವ ಫೋಟೋ. ಇವುಗಳು ಕೆಲವರಿಗೆ ಸಾಮಾನ್ಯ ಅನ್ನಿಸಬಹುದು. ಕಳಿಸಿರುವ ಸನ್ನಿವೇಶ ಮಾತಾಡುವಂತೆ ಮಾಡಿದೆ ಎಂದು ಪೋಸ್ಟ್ ಮಾಡಿದ್ದಾರೆ.”