ನ್ಯೂಸ್ ನಾಟೌಟ್: ಯುವತಿಯರ ಬಳಸಿಕೊಂಡು ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಉಜಿರೆಯ ಲಾಡ್ಜ್ ವೊಂದರ ಮೇಲೆ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ.
ಉಜಿರೆಯ ಚಾರ್ಮಾಡಿ ರಸ್ತೆಯಲ್ಲಿರುವ ಸುರೇಶ್ ಪೂಜಾರಿ ಎಂಬುವವರು ಲಾಡ್ಜ್ ಅನ್ನು ಬಾಡಿಗೆ ಪಡೆದುಕೊಂಡಿದ್ದರು ಎನ್ನಲಾಗಿದೆ. ಫೆ.೭ ರಂದು ಸಂಜೆ ದಾಳಿ ನಡೆದಿದ್ದು ದಾಳಿ ವೇಳೆ ಲಾಡ್ಜ್ನೊಳಗೆ ಐದು ಮಂದಿ ಯುವತಿಯರು ಇದ್ದರು ಎನ್ನಲಾಗಿದೆ. ಮಾತ್ರವಲ್ಲ ಲಾಡ್ಜ್ ಸಿಬ್ಬಂದಿಯನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ. ಪೊಲೀಸರು ಇದೀಗ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.