ನ್ಯೂಸ್ ನಾಟೌಟ್ : ಬಂಟ್ವಾಳದಲ್ಲಿ ಇತ್ತೀಚಿಗೆ ಕಳವು ಪ್ರಕರಣ ಹೆಚ್ಚುತ್ತಿದ್ದು , ಸಾರ್ವಜನಿಕರ ದೂರಿನ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ವ್ಯಾಪ್ತಿಯಲ್ಲಿ ಇತ್ತೀಚಿಗೆ ಕಳವು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೂರ್ಲಿಪ್ಪಾಡಿ ಎಂಬಲ್ಲಿ ನಿರ್ಮಾಣದ ಹಂತದ ಕಟ್ಟಡದ ಬಳಿ ಹಾಕಿದ್ದ 98,000 ರೂ. ಮೌಲ್ಯದ 89 ಕಬ್ಬಿಣ ಮತ್ತು ಸೆಂಟ್ರಿಂಗ್ ಶೀಟ್ ಹಾಗೂ 90,000 ರೂ ಮೌಲ್ಯದ 400 ಕೆ.ಜಿ. ಅಡಿಕೆ ಕಳವು ಮಾಡಿರುವುದಾಗಿ ಪ್ರಕರಣಗಳು ದಾಖಲಾಗಿದೆ.
ಈ ಕಳವಿನ ಆರೋಪದ ಮೇಲೆ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ತುಂಬೆ ಗ್ರಾಮದ ಬೊಳ್ಳಾರಿ ನಿವಾಸಿ ಮೊಹಮ್ಮದ್ ಅನ್ಸಾಫ್ (34), ಮಧಕ ನಿವಾಸಿ ನವಾಜ್ (24 ) ಎಂದು ಗುರುತಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಪೊಲೀಸ್ ಉಪಾಧೀಕ್ಷಕರಾದ ಪ್ರತಾಪ್ ಸಂಗ್ ಥೋರಾಟ್ ಮತ್ತು ಉಪ-ಪೊಲೀಸ್ ನಿರೀಕ್ಷಕರಾದ ವಿವೇಕಾನಂದ ಇವರ ನಿರ್ದೇಶನದಂತೆ ಬಂಟ್ವಾಳ ನಗರ ಪೊಲೀಸ್ ಠಾಣಾ ಅಪರಾಧ ವಿಭಾಗದ ಪೊಲೀಸ್ ಸಿಬ್ಬಂದಿಗಳಾದ ಎಎಸ್ಐ ನಾರಾಯಣ , ಚಿನ್ನಪ್ಪ ಗೌಡ, ಇರ್ಷಾದ್ .ಪಿ, ರಾಜೇಶ್ , ಗಣೇಶ್, ಮನೋಹರ, ಪ್ರವೀಣ್ ಪಿ.ಸಿ, ಮೋಹನ ಭಾಗವಹಿಸಿದ್ದರು.