ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಸಬಾ ಗ್ರಾಮದ ಸೂತ್ರಬೆಟ್ಟು ಎಂಬಲ್ಲಿ ಕಳ್ಳರ ತಂಡವೊಂದು ಮನೆಯ ಬೀಗ ಮುರಿದು ಟೀವಿ, ಇನ್ವರ್ಟರ್ ಬ್ಯಾಟರಿ, ಇಸ್ತ್ರಿಪೆಟ್ಟಿಗೆ ಮತ್ತು ನಗದು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.
ಟಿ . ಗೋಪಿ ಎನ್ನುವವರಿಗೆ ಸೇರಿದ ಮನೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಇದೀಗ ಪೊಲೀಸರು ಭೇಟಿ ನೀಡಿದ್ದಾರೆ. ಅನುಮಾನಸ್ಪದ ವ್ಯಕ್ತಿಗಳು ಪುತ್ತೂರಿನಲ್ಲಿ ಓಡಾಡುತ್ತಿದ್ದು ಅವರ ಬಗ್ಗೆ ಪೊಲೀಸರು ಹದ್ದಿನ ಕಣ್ಣಿಡಬೇಕಿದೆ. ಇಲ್ಲದಿದ್ದರೆ ಇಂತಹ ಘಟನೆಗಳು ಮತ್ತೆ ನಡೆಯುವ ಆತಂಕವಿದೆ ಎಂದು ಸ್ಥಳೀಯರು ಪ್ರತಿಕ್ರಿಯಿಸಿದ್ದಾರೆ.