ನ್ಯೂಸ್ ನಾಟೌಟ್: ಇತಿಹಾಸ ಪ್ರಸಿದ್ದ ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜಾತ್ರೋತ್ಸವ ನಡಿತಿದೆ.ಜಾತ್ರೋತ್ಸವಕ್ಕೆ ಸಾವಿರಾರು ಭಕ್ತಾದಿಗಳು ಬಂದು ಶ್ರೀ ಚೆನ್ನಕೇಶವ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ಜ.೩ರಿಂದ-೧೨ರವರೆಗೆ ಜಾತ್ರಾ ಸಂಭ್ರಮ:
ಬೆಳಗ್ಗೆ ಉಗ್ರಾಣ ಮುಹೂರ್ತದೊಂದಿಗೆ ಜಾತ್ರೋತ್ಸವ ಆರಂಭಗೊಂಡಿತು.ಸಂಜೆ ನಾಲ್ಕು ದೈವಗಳ ಚಾವಡಿಯಿಂದ ಬಲ್ಲಾಳರ ಪಯ್ಯೋಳಿ ತರಲಾಯಿತು. ನಂತರ ಕುಕ್ಕನೂರು ದೈವಗಳ ಭಂಡಾರ ಆಗಮನವಾಯಿತು.ಇದಾದ ನಂತರ ಧ್ವಜಾರೋಹಣ ನಡೆಯಿತು. ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು.ಜಾತ್ರೆ ಸಂಭ್ರಮ ಜನವರಿ ೩ರಿಂದ ೧೨ರವರೆಗೆ ನಡೆಯಲಿದೆ.
ಈ ಸಂದರ್ಭ ದೇವಾಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ,ಸಮಿತಿ ಸದಸ್ಯರು,ಗಿರಿಜಾ ಶಂಕರ ತುದಿಯಡ್ಕ. ಕೃಪಾಶಂಕರ ತುದಿಯಡ್ಕ, ಇತರ ಗಣ್ಯರು,ಭಕ್ತಾದಿಗಳು ಉಪಸ್ಥಿತರಿದ್ದರು.