ಕರಾವಳಿ

ಲವ್ವರ್ ಮೈ ಮುಟ್ಟಿದ್ದಕ್ಕೆ ಗೂಸಾ, ಯಾರ್ ಬೇಕಾದ್ರೂ ತಬ್ಬಿಕೊಳ್ಳಿ-ಯುವತಿ ಆಫರ್‌, ಕುಡಿದು ರಸ್ತೆಯಲ್ಲೇ ಮಲಗಿದ ಯುವತಿ..!

ನ್ಯೂಸ್ ನಾಟೌಟ್ : ಹೊಸವರ್ಷ ಸಂಭ್ರಮಕ್ಕೆ ಲವ್ವರ್ ಮೈ ಮುಟ್ಟಿದ್ದಕ್ಕೆ ಯುವಕನೊಬ್ಬ ಗೂಸಾ ಕೊಟ್ಟಿದ್ದಾನೆ. ಇನ್ನೊಂದು ಕಡೆ ಯಾರೂ ಬೇಕಾದ್ರೂ ಹಗ್ ಮಾಡಿ ಎಂದು ರಸ್ತೆಯಲ್ಲಿ ಹೋದವರಿಗೆಲ್ಲ ಯುವತಿ ಆಫರ್ ಕೊಟ್ಟಿದ್ದಾಳೆ. ಮತ್ತೊಂದು ಕಡೆ ಕಂಠಪೂರ್ತಿ ಕುಡಿದು ಯುವತಿಯೊಬ್ಬಳು ರಸ್ತೆಯಲ್ಲೇ ಮಲಗಿದ್ದಾಳೆ. ಇದು ರಾಜಧಾನಿ ಬೆಂಗಳೂರಿನಲ್ಲಿ ಕಂಡು ಬಂದ ನ್ಯೂಯರ್ ಸಂಭ್ರಮದ ದೃಶ್ಯ..!

ಚರ್ಚ್ ಸ್ಟ್ರೀಟ್‌ನಲ್ಲಿ ಹೊಸ ವರ್ಷದ ಸಂಭ್ರಮ ಎಲ್ಲೆ ಮೀರಿತು. ಭಾರಿ ನೂಕು ನುಗ್ಗಲಿನಲ್ಲಿ ಅವಕಾಶ ಮಾಡಿಕೊಂಡ ಕಿಡಿಗೇಡಿಯೊಬ್ಬ ಯುವತಿ ಮೈಗೆ ಕೈ ಹಾಕಿದ್ದಾನೆ. ಇದರಿಂದ ರೊಚ್ಚಿಗೆದ್ದ ಯುವಕನೊಬ್ಬ ಪಂಚ್ ಮಾಡಿದ್ದ. ಏಟು ತಿಂದ ಕಿಡಿಗೇಡಿ ಅಲ್ಲಿಂದ ದಿಕ್ಕೆಟ್ಟು ಓಡಿದ್ದ.

ಬೆಂಗಳೂರಿನ ಕೋರಮಂಗಲದಲ್ಲೂ ನ್ಯೂಇಯರ್ ಸೆಲೆಬ್ರೆಷನ್ ಜೋರಾಗಿತ್ತು. ಕಂಠಪೂರ್ತಿ ಕುಡಿದ ಯುವತಿಯೊಬ್ಬಳು ಪಬ್‌ ನಿಂದ ಹೊರಗೆ ಬಂದು ರಸ್ತೆಯ ಮೇಲೆ ಹಾಗೆ ಬಿದ್ದಿದ್ದಳು. ಕೂಡಲೇ ಆಕೆಯ ಸ್ನೇಹಿತರು ಆಗಮಿಸಿ ಯುವತಿಯನ್ನು ಕೂರಿಸಿ ಉಪಚರಿಸಿದರು.

ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಯುವತಿಯೊಬ್ಬಳು ಫಲಕ ಹಿಡಿದು ನಿಂತುಕೊಂಡಿದ್ದಳು. ಅದರಲ್ಲಿ ಯಾರು ಬೇಕಾದರೂ ನನ್ನನ್ನು ತಬ್ಬಿಕೊಳ್ಳಿ ಎಂದು ಬರೆದಿತ್ತು. ಹಾಗಾಗಿ ರಸ್ತೆಯಲ್ಲಿ ಹೋಗುವವರೆಲ್ಲ ಆಕೆಯನ್ನು ತಬ್ಬಿ ಹೋಗುತ್ತಿದ್ದರು. ಇದು ಗಮನಕ್ಕೆ ಬಂದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಬ್ಬಿಕೊಳ್ಳಲು ಬಂದಿದ್ದವರನ್ನೆಲ್ಲ ಓಡಿಸಿ ಆಕೆಗೆ ಬುದ್ಧಿವಾದ ಹೇಳಿ ಕಳಿಸಿದರು.

Related posts

ಸುಳ್ಯ ತಾಲೂಕು ಕಚೇರಿಯಲ್ಲಿ ದಿಢೀರ್ ಕುಸಿದು ಬಿದ್ದ ವ್ಯಕ್ತಿ, ಸಾವಿಗೀಡಾಗಿದ್ದನ್ನು ಖಚಿತಪಡಿಸಿದ ಸರ್ಕಾರಿ ಆಸ್ಪತ್ರೆಯ ವೈದ್ಯರು

ಶಾಲಾ ಮಕ್ಕಳಲ್ಲಿ ಕೆಂಗಣ್ಣು ಕಾಣಿಸಿಕೊಂಡರೆ ರಜೆ ಕೊಡಿ

ಪ್ರವಾಸಿ ತಾಣಗಳಲ್ಲಿ ರಜೆಯ ಮೋಜು ಅನುಭವಿಸಿದ ಪ್ರವಾಸಿಗರು..!ದೇವಸ್ಥಾನಗಳಲ್ಲಿಯೂ ಭಕ್ತರ ಸರತಿ ಸಾಲು..!