ನ್ಯೂಸ್ ನಾಟೌಟ್ : ಸುಳ್ಯ ತಾಲೂಕಿನಲ್ಲಿ ಮಂಗಳವಾರದಿಂದ ಆರಂಭವಾಗಲಿರುವ ಮೂರು ದಿನಗಳ ಗ್ರಾಮ ವಾಸ್ತವ್ಯ ಮತ್ತು ಸಮುದಾಯ ಮಿಲನ ಕಾರ್ಯಕ್ರಮಕ್ಕಾಗಿ ಆಗಮಿಸಿರುವ ಆದಿಚುಂಚನಗಿರಿ ಮಹಾಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಸೋಮವಾರ ಮಂಗಳೂರಿಗೆ ಆಗಮಿಸಿದರು.
ಈ ವೇಳೆ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಗೌಡ ಸಂಘದ ವತಿಯಿಂದ ಮಂಗಳೂರಿನ ಶ್ರೀ ಆದಿಚುಂಚನಗಿರಿ ಶಾಖಾ ಮಠ ಕಾವೂರಿನಲ್ಲಿ ಸ್ವಾಗತಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಯುವ ಗೌಡ ಸಂಘದ ವತಿಯಿಂದ ಪೂಜ್ಯ ಸ್ವಾಮೀಜಿಯವರಿಗೆ ವೀಳ್ಯ ನೀಡಿ ಆಮಂತ್ರಣ ಕೊಟ್ಟು ಅಕ್ಷಯ್ ಕೆ.ಸಿ, ಡಾ.ಲೀಲಾಧರ್ ಡಿ ವಿ, ರಕ್ಷಿತ್ ಪುತ್ತಿಲ ಹಾಗೂ ಮತ್ತಿತರ ಗಣ್ಯರು ಕಾರ್ಯಕ್ರಮಕ್ಕೆ ಬರ ಮಾಡಿಕೊಂಡರು.