ನ್ಯೂಸ್ ನಾಟೌಟ್: ಚಿನ್ನವನ್ನು ವಿದೇಶದಿಂದ ಕದ್ದು ಮುಚ್ಚಿ ಸಾಗಿಸಿ ಕೊನೆಗೆ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬೀಳುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಯುವತಿ ಒಳ ಉಡುಪಿನಲ್ಲಿ ಚಿನ್ನ ಸಾಗಿಸಿ ಇದೀಗ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿದ್ದಾಳೆ.
ಕಾಸರಗೋಡಿನ ಶಹಲಾ (19) ಎಂಬ ಯುವತಿ ಭಾನುವಾರ ದುಬೈನಿಂದ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇಳಿದಿದ್ದಾಳೆ. ಈಕೆಯ ಮೇಲೆ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ತನಿಖೆ ವೇಳೆ ಈಕೆ ಯಾವುದನ್ನೂ ಬಾಯಿ ಬಿಟ್ಟಿರಲಿಲ್ಲ. ಈಕೆಯ ಬಳಿ ಲಗೇಜ್ ಇದ್ದು ಅದನ್ನು ತಪಾಸಣೆ ನಡೆಸುವಾಗಲೂ ಏನೂ ಸಿಕ್ಕಿರಲಿಲ್ಲ. ಕೊನೆಗೆ ದೇಹವನ್ನು ತಪಾಸಣೆ ನಡೆಸಲಾಯಿತು. ಈ ವೇಳೆ 1.884 ಕಿ.ಲೋ ಚಿನಾಭರಣವನ್ನು ಮೂರು ಪ್ಯಾಕೇಟ್ಗಳಾಗಿ ಮಾಡಿ ಒಳ ಉಡುಪಿನಲ್ಲಿ ಸಾಗಾಟ ಮಾಡುತ್ತಿದ್ದದ್ದು ಪತ್ತೆಯಾಗಿದೆ.