ನ್ಯೂಸ್ ನಾಟೌಟ್: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಇಂದಿನಿಂದ (ಶನಿವಾರ) ಲಕ್ಷದೀಪೋತ್ಸವ ಆರಂಭವಾಗಿದೆ.
ಇದೀಗ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜತೆಗೆ ಆರು ದಿನಗಳ ಕಾಲ ನಡೆಯಲಿದ್ದು ಧಾರ್ಮಿಕ, ಜ್ಞಾನ , ಮನೋರಂಜನೆಯ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಭಕ್ತರ ಸ್ವಾಗತಕ್ಕೆ ಸರ್ವಸಿದ್ದತೆ ಆಗುತ್ತಿದೆ, ಶನಿವಾರ ಬೆಳಗ್ಗೆ ೧೦ :೩೦ ಕ್ಕೆ ಪ್ರೌಢ ಶಾಲೆಯ ಕೀಡಾಂಗಣದಲ್ಲಿ ಶಾಸಕ ಹರೀಶ್ ಪೂಂಜಾ ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟಿಸಿದರು. ಶ್ರೀ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗೆಡೆ ಉಪಸ್ಥಿತರಿದ್ದರು. ನವೆಂಬರ್ ೧೯ ರಂದು ೩ ಗಂಟೆಗೆ ೧೦ನೇ ವರ್ಷದ ಪಾದಯಾತ್ರೆ ನಡೆಯಲಿದ್ದು ಹೆಚ್ಚಿನ ಭಕ್ತರು ಪಾಲ್ಗೊಳ್ಳಲಿದ್ದಾರೆ. ನವೆಂಬರ್ ೨೦ ರಂದು ಕೆರೆಕಟ್ಟೆ ಉತ್ಸವ , ೨೧ ರಂದು ಲಲಿತೋದ್ಯಾನ ಉತ್ಸವ, ೨೨ ರಂದು ಕಂಚಿ ಮಾರುಕಟ್ಟೆ ಉತ್ಸವ , ೨೩ ರಂದು ಗೌರಿಮಾರು ಉತ್ಸವ ಹಾಗೂ ೨೪ ರಂದು ಭಗವಾನ್ ಚಂದ್ರನಾಥ ಸ್ವಾಮಿ ಸಮಾವರಣ ಪೂಜೆ ನಡೆಯಲಿದೆ ಎಂದು ಕ್ಷೇತ್ರದ ಅಧಿಕಾರಿಗಳು ತಿಳಿಸಿದ್ದಾರೆ.