ನ್ಯೂಸ್ ನಾಟೌಟ್: ಕರಾವಳಿ ಜನರ ಆರಾಧ್ಯ ದೈವ ಸ್ವಾಮಿ ಕೊರಗಜ್ಜ. ಈ ದೈವದ ಕಾರ್ಣಿಕದ ಶಕ್ತಿ ಈಗಾಗಲೇ ಹಲವು ಸಲ ಸಾಬೀತಾಗಿದ್ದು ಅಜ್ಜ ಎಂದು ಕರೆದರೆ ಕಷ್ಟಗಳು ಕರಗಿ ಹೋಗುತ್ತದೆ ಅನ್ನುವ ನಂಬಿಕೆ ಭಕ್ತರದ್ದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಸ್ವಾಮಿ ಕೊರಗಜ್ಜ ದೈವಸ್ಥಾನಗಳಿವೆ. ಅಂತಹ ಪವರ್ಫುಲ್ ಕೊರಗಜ್ಜ ದೈವದ ಸನ್ನಿಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸ್ವಾಮಿ ಕೊರಗಜ್ಜ ದೈವ ಸನ್ನಿಧಿಯೂ ಒಂದು.
ನ್ಯೂಸ್ ನಾಟೌಟ್ ಮಾಧ್ಯಮ ಹಲವು ಸಲ ಈ ಸನ್ನಿಧಿಯ ಶಕ್ತಿಯ ಬಗ್ಗೆ ವರದಿ ಮಾಡಿತ್ತು. ಯೂಟ್ಯೂಬ್ನಲ್ಲಿ ವಿಶೇಷ ಕಾರ್ಯಕ್ರಮವನ್ನೂ ಕೂಡ ಪ್ರಸಾರ ಮಾಡಿತ್ತು. ಕಳೆದ ಕೆಲವು ತಿಂಗಳಿನಿಂದ ಈ ಸನ್ನಿಧಿಗೆ ಆಗಮಿಸುವ ಭಕ್ತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದೀಗ ಭಾನುವಾರವೂ ಈ ಸನ್ನಿಧಿಯಲ್ಲಿ ಹೆಚ್ಚು ಜನರು ನೆರೆದಿರುತ್ತಾರೆ. ಊರ ಹಾಗೂ ಪರವೂರ ಭಕ್ತರು ಆಗಮಿಸಿ ತಮ್ಮ ಹರಕೆಗಳನ್ನು ಸಲ್ಲಿಸುತ್ತಿದ್ದಾರೆ. ಹಲವಾರು ಮಂದಿ ಈ ಸನ್ನಿಧಿಗೆ ಬಂದು ಜೀವನದಲ್ಲಿ ಕಷ್ಟನಷ್ಟಗಳನ್ನು ಪರಿಹರಿಸಿಕೊಂಡು ಏಳಿಗೆ ಕಂಡಿದ್ದಾರೆ. ನ್ಯೂಸ್ ನಾಟೌಟ್ ಚಾನೆಲ್ ನಲ್ಲಿ ಪ್ರಸಾರವಾಗಿದ್ದ ದೊಡ್ಡಡ್ಕ ಕೊರಗಜ್ಜನ ಮಹಿಮೆಯ ಕಥೆಯನ್ನು ನೋಡುವುದಕ್ಕೆ ಈ ಲಿಂಕ್ ಕ್ಲಿಕ್ ಮಾಡಿ…