ನ್ಯೂಸ್ ನಾಟೌಟ್ : ಇತ್ತೀಚೆಗೆ ಅನ್ಯಕೋಮಿನ ವ್ಯಾಪಾರಸ್ಥರು ಹಿಂದೂ ದೇವಸ್ಥಾನಗಳ ಬಳಿ ವ್ಯಾಪಾರ ನಡೆಸಬಾರದು ಎನ್ನುವ ಧರ್ಮ ದಂಗಲ್ನ ಕೂಗು ಕೇಳಿ ಬರುತ್ತಿದೆ. ಈ ನಡುವೆ ಕೊಡಗಿನ ಪೊನ್ನಂಪೇಟೆಯ ಹರಿಹರದಲ್ಲಿ ಅನ್ಯಕೋಮಿನ ವ್ಯಕ್ತಿಗಳು ಹಿಂದೂಗಳ ಹೆಸರಿನಲ್ಲಿ ನಕಲಿ ಕಾರ್ಡ್ ಮಾಡಿಸಿಕೊಂಡು ಬಂದು ವ್ಯಾಪಾರ ನಡೆಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಕೊಡಗಿನ ಪೊನ್ನಂಪೇಟೆ ತಾಲೂಕಿನ ಹರಿಹರ ಸುಬ್ರಹ್ಮಣ್ಯ ದೇವಾಲಯದಲ್ಲಿ ಷಷ್ಠಿ ಮತ್ತು ವಾರ್ಷಿಕೋತ್ಸವದ ನಡೆಯಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆಯೇ ಅನ್ಯಕೋಮಿನವರಿಗೆ ವ್ಯಾಪಾರಕ್ಕೆ ನಿಷೇಧ ಎಂದು ಹಿಂದೂ ಸಂಘಟನೆಗಳು ಕಟ್ಟೆಚ್ಚರ ನೀಡಿದ್ದರು. ಒಂದು ವೇಳೆ ವ್ಯಾಪಾರ ನಡೆಸಲು ಬಂದರೆ ಅದರ ಪರಿಣಾಮ ಬೇರೆ ರೀತಿಯಲ್ಲಿ ಎದುರಿಸಬೇಕಾಗುತ್ತದೆ ತಿಳಿಸಿದ್ದಾರೆ. ಈ ಎಚ್ಚರಿಕೆಯ ನಡುವೆಯೂ ಅನ್ಯಕೋಮಿನ ಕೆಲ ಯುವಕರು ಹಿಂದೂಗಳ ಹೆಸರು ಹಾಕಿ ನಕಲು ಐಡಿ ಕಾರ್ಡ್ ಬಳಸಿಕೊಂಡು ವ್ಯಾಪಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ದೇವಾಲಯದ ಹೊರಗೆ ಸಂಶಯಾಸ್ಪದವಾಗಿ ವ್ಯಾಪಾರಸ್ಥರನ್ನು ಕಂಡ ಸಂಘಟನಾಕಾರರು ವ್ಯಾಪಾರಸ್ಥರ ಐಡಿ ಕಾರ್ಡ್ ಪರಿಶೀಲಿಸದಾಗ ಅನ್ಯಕೋಮಿನವರು ಎಂದು ತಿಳಿದುಬಂದಿದೆ. ಕೂಡಲೇ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ದುರ್ಗಾವಾಹಿನಿ ಜಿಲ್ಲಾ ಸಂಚಾಲಕಿ ಅಂಬಿಕಾ ಅವರು ಸ್ಥಳಕ್ಕೆ ಆಗಮಿಸಿ ಅನ್ಯಕೋಮಿನ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಅವರ ವ್ಯಾಪಾರ ಸಾಮಾಗ್ರಿಗಳನ್ನು ತೆರವು ಮಾಡಿ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.