ನ್ಯೂಸ್ ನಾಟೌಟ್: ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ‘ಬರ್ತಿಯಾ’ ಎಂದು ಕೇಳಿದ ಯುವಕನ ಹಿಡಿದು ಕಂಬಕ್ಕೆ ಕಡಿದು ಹಾಕಿ ಊರಿನವರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ವರದಿಯಾಗಿದೆ.
ಬಲ್ನಾಡು ಗ್ರಾಪಂ ವ್ಯಾಪ್ತಿಯ ಸಾಜ ಪನೆತ್ತಡ್ಕ ಎಂಬಲ್ಲಿ ಬುಳೇರಿಕಟ್ಟೆ ಸಾಜ ಕ್ರಾಸ್ ಬಳಿ ಅ.20ರಂದು ಸಂಜೆ ಬಸ್ಸಿನಿಂದ ಇಳಿದು ಮನೆಗೆ ತೆರಳುತ್ತಿದ್ದ ಯುವತಿಯೊರ್ವಳನ್ನು ಅದೇ ದಾರಿಯಲ್ಲಿ ಸ್ಕೂಟರ್ನಲ್ಲಿ ತೆರಳುತ್ತಿದ್ದ ಸಾಜ ನಿವಾಸಿಯೋರ್ವ ಬರ್ತೀಯಾ ಎಂದು ಕೇಳಿದ್ದಾನೆ ಎನ್ನಲಾಗಿದೆ. ಹಾಗೆ ಹೇಳಿ ಮುಂದಕ್ಕೆ ಹೋದ ಯುವಕನ ಸ್ಕೂಟರ್ ಸ್ವಲ್ಪ ದೂರದಲ್ಲಿ ಹಾಳಾಗಿದೆ. ಆತ ಅದನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ. ಇತ್ತ ಯುವತಿ ತನಗಾದ ಅವಮಾನವನ್ನು ಸಂಬಂಧಿಕರೊಂದಿಗೆ ಹೇಳಿಕೊಂಡಿದ್ದಾಳೆ. ಯವಕನ ಸ್ಕೂಟರ್ ಬಳಿ ಕಾದು ಕುಳಿತ ಊರವರು ಮರುದಿನ ಅವನು ಸ್ಕೂಟರ್ ಪಡೆದುಕೊಳ್ಳಲು ಬಂದಾಗ ಆತನನ್ನು ಕಂಬಕ್ಕೆ ಕಟ್ಟಿ ಹಾಕಿ ಚೆನ್ನಾಗಿ ಥಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.