ನ್ಯೂಸ್ ನಾಟೌಟ್: ಸಾವಯವ ಕೃಷಿಕರೊಬ್ಬರು ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ. ಕಾರ್ಕಳದ ದುರ್ಗಾ ಗ್ರಾಮದ ನಿಲೆಬೆಟ್ಟು ಗುತ್ತು ಮನೆಯ ಸಾವಯವ ಕೃಷಿಕ ಬಾಸ್ಕರ್ ಹೆಗ್ಡೆ ಗುಂಡು ಹೊಡೆದುಕೊಂಡು ಸಾವಿಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕಾರ್ಕಳದ ಪರಿಸರದಲ್ಲಿ ಸಾವಯವ ಕೃಷಿಯಲ್ಲಿ ಮನೆಮಾತಾಗಿದ್ದರು, ದುರ್ಗಾ ಪಂಚಾಯತ್ ನ ಸದಸ್ಯರು, ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಭಾಸ್ಕರ್ ಹೆಗ್ಡೆ ತನ್ನ ಮನೆಯಲ್ಲಿ ನಾಡಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೆನೆಂದು ತಿಳಿದು ಬಂದಿಲ್ಲ