ನ್ಯೂಸ್ ನಾಟೌಟ್: ಹಿಂದೂ ಕಾರ್ಯಕರ್ತ ಬಿಜೆಪಿ ಯುವ ಮೋರ್ಚಾ ಪ್ರವೀಣ್ ನೆಟ್ಟಾರ್ ಹತ್ಯೆ ಬೆನ್ನಲ್ಲೇ ಇದೀಗ ಮಂಗಳೂರಿನ ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ದುಷ್ಕರ್ಮಿಗಳು ದೂರವಾಣಿ ಮೂಲಕ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಹಿಂದೂ ಸಂಘಟನೆಯ ಕಾರ್ಯಕರ್ತ ಅಶ್ವತ್ಥ್ ಅನ್ನುವವರಿಗೆ ಬೆದರಿಕೆ ಕರೆ ಬಂದಿದ್ದು ‘ಒಬ್ಬನನ್ನು ತೆಗೆದಿದ್ದೇವೆ. ನಿನ್ನನ್ನೂ ಕೂಡ ಬೇಗ ತೆಗೆಯುತ್ತೇವೆ. ನಿನಗೆ ಒಂದು ವಾರ ಮಾತ್ರ ಟೈಮ್ ಇರುವುದು. ಎಲ್ಲಿಗಾದರೂ ಹೋಗಲು ಇದ್ದರೆ ಈಗಲೇ ಹೋಗಿ ಬಾ, ಆಮೇಲೆ ನಿನಗೆ ಆಗುವುದಿಲ್ಲ’ ಎಂದು ದುಷ್ಕರ್ಮಿ ಆವಾಜ್ ಹಾಕುತ್ತಿರುವ ಆಡಿಯೋ ಈಗ ವೈರಲ್ ಆಗುತ್ತಿದೆ. ಸದ್ಯ ಪ್ರವೀಣ್ ಹತ್ಯೆಯ ನಂತರ ಸುಳ್ಯ ತಾಲೂಕು ಸೇರಿದಂತೆ ಕರಾವಳಿಯ ಬಹುತೇಕ ಕಡೆ ಬೂದಿ ಮುಚ್ಚಿದ ಕೆಂಡದಂತಿದೆ. ಉಡುಪಿಯಲ್ಲಿ ಸಂಘಟನೆಯ ವ್ಯಕ್ತಿಯ ಮನೆಯ ಹತ್ತಿರ ದುಷ್ಕರ್ಮಿಗಳು ಬಂದು ಬೆದರಿಕೆ ಹಾಕಿದ ಘಟನೆಯೂ ನಡೆದಿದ್ದನ್ನು ಸ್ಮರಿಸಬಹುದು. ಇಂತಹ ಸಂದರ್ಭದಲ್ಲಿ ದುಷ್ಕರ್ಮಿಗಳು ಹೀಗೆ ಫೋನ್ ಮಾಡಿ ಬೆದರಿಕೆ ಹಾಕುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪೊಲೀಸ್ ಇಲಾಖೆ ತಕ್ಷಣ ಅಲರ್ಟ್ ಆಗಿ ಇದರ ಹಿಂದಿರುವ ವ್ಯಕ್ತಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಇಂತಹ ವಿಚಾರ ಮುಂದೆ ಭಾರಿ ಅನಾಹುತಗಳಿಗೆ ದಾರಿಯಾಗಬಹುದು.