ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎದ್ದಿರುವ ಆಂತರಿಕ ರಾಜಕೀಯ ಬೆಳವಣಿಗೆಗಳು ಈಗ ಭಾರಿ ಕುತೂಹಲಕ್ಕೆ ಹಾಗೂ ಚರ್ಚೆಗೆ ಕಾರಣವಾಗಿದೆ.
ಹೌದು, ದಿಢೀರ್ ಬೆಳವಣಿಗೆಯಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಕಾರ್ಯ ನಿರ್ವಹಣಾಧಿಕಾರಿ ನಿಂಗಯ್ಯ ಮುಂದುವರಿಕೆ ತೀವ್ರ ಅಸಮಾಧಾನಗೊಂಡಿದ್ದು ರಾಜೀನಾಮೆಗೆ ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ನ್ಯೂಸ್ ನಾಟೌಟ್ ಗೆ ಉನ್ನತ ಮೂಲಗಳಿಂದ ಸಿಕ್ಕಿದೆ.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಮತ್ತು ಅವರ ಜತೆಗಿರುವ ಕೆಲವು ಸದಸ್ಯರು ಎಂದು ತಿಳಿದು ಬಂದಿದೆ. ವ್ಯವಸ್ಥಾಪನ ಸಮಿತಿಯಲ್ಲಿ ಬಿರುಕು ಉಂಟಾಗುವುದಕ್ಕೆ ಸಮಿತಿಯಲ್ಲಿದ್ದ ಸದಸ್ಯರೊಬ್ಬರ ಕೈವಾಡವೂ ಇದೆ ಎನ್ನಲಾಗುತ್ತಿದೆ.
ನಿಂಗಯ್ಯ ಅವರನ್ನು ವರ್ಗಾವಣೆ ಮಾಡಿಸುವಲ್ಲಿ ವಿಫಲರಾದ ಸಚಿವ ಎಸ್ ಅಂಗಾರ ವಿರುದ್ಧ ಸಮಿತಿ ಸದಸ್ಯರಿಂದ ಆಕ್ರೋಶ ವ್ಯಕ್ತವಾಗಿದೆ. ಈ ವಿಚಾರದಲ್ಲಿ ಸಚಿವರು ಸರಿಯಾಗಿ ಕೆಲಸ ನಿರ್ವಹಿಸಿಲ್ಲ ಎನ್ನುವ ಅಸಮಾಧಾನ ಸ್ವತಃ ಬಿಜೆಪಿ ಒಳಗಿನಿಂದಲೇ ಕೇಳಿ ಬರುತ್ತಿದೆ. ಮುಂದಿನ ಚುನಾವಣೆಯಲ್ಲಿ ಅಂಗಾರರು ನಿಂತರೆ ಅವರಿಗೆ ಓಟು ಕೂಡ ಹಾಕುವುದಿಲ್ಲ ಎನ್ನುವ ಮಟ್ಟಿಗಿನ ಚರ್ಚೆ ಬಿಜೆಪಿಯೊಳಗೆ ನಡೆದಿದೆ ಎನ್ನಲಾಗಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ನಿಂಗಯ್ಯ ಅವರ ವರ್ಗಾವಣೆಗೆ ಬಹಳಷ್ಟು ಸಮಯಗಳಿಂದ ಅಂಗಾರ ಅವರಿಗೆ ಒತ್ತಡವಿತ್ತು. ಕೊನೆಗೂ ನಿಂಗಯ್ಯ ಅವರ ವರ್ಗಾವಣೆಗೆ ಆದೇಶ ಕೂಡ ಆಗಿತ್ತು. ಆದರೆ ಈ ಆದೇಶ ವಾರದೊಳಗೆ ರದ್ದಾಗಿದ್ದು, ಇದೇ ಸ್ಥಾನದಲ್ಲಿ ಮುಂದುವರಿಯುವಂತೆ ಹೊ ಸ ಆದೇಶವಾಗಿದೆ. ಕಾರ್ಯದರ್ಶಿಯವರು ಈ ಹೊಸ ಆದೇಶ ಹೊರಡಿಸಿದ್ದಾರೆ.