ವಿಟ್ಲ: ಸಂಪ್ಯ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಿಟ್ಲ ಮೂಲದ ಪೊಲೀಸ್ ವೊಬ್ಬರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹೆಸರು ಗಣೇಶ್, ವಿಟ್ಲದ ಅಡ್ಕಸ್ಥಳ ನಿವಾಸಿ. ಅವರಿಗೆ 42 ವರ್ಷವಾಗಿತ್ತು. ಗಣೇಶ್ ಅವರು ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ, ಪುತ್ರ , ಕುಟುಂಬಸ್ಥರು ಹಾಗೂ ಸ್ನೇಹಿತ ವರ್ಗವನ್ನು ಅಗಲಿದ್ದಾರೆ.