ಬಿಳಿನೆಲೆ: ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವರ ವರ್ಷಾವಧಿ ಜಾತ್ರೋತ್ಸವ ಮತ್ತು ನಿಶಿ ಪೂರ್ಣ ಭಜನೆ ಇದೀಗ ಕಳೆಗಟ್ಟಿದೆ.
ಇಂದು ಜಾತ್ರೋತ್ಸವದ ಮಹತ್ವದ ದಿನ. ಬ್ರಹ್ಮಶ್ರೀ ಉಚ್ಚಿಲ ಕೆ.ಯು. ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ವಿವಿಧ ತಾಂತ್ರಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿದೆ. ಬೆಳಗ್ಗೆ 6 ರಿಂದ ಗಣಪತಿ ಹವನ, ಕಲಶ ಪೂಜೆ, ಮಧ್ಯಾಹ್ನ ಕಲಶಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ, ಸಂಜೆ 6 ಗಂಟೆಯಿಂದ ದೀಪಾರಾಧನೆ, ಸಂಧ್ಯಾವಂದನೆ ನಡೆಯಲಿದೆ. ಸಂಜೆ 6.15 ರಿಂದ ಕರ್ನಾಟಕ ಸಂಗೀತ ಕಛೇರಿ ಏರ್ಪಡಿಸಲಾಗಿದೆ. ವಿದ್ವಾನ್ ಮುರಳಿ ಕೃಷ್ಣ ಕಾವು ಪಟ್ಟಾಜೆ (ಗಾಯನ), ಮಾಸ್ಟರ್ ಸುಮೇಧ ಕನ್ಯಾನ ಅಮೈ (ವಯಲಿನ್), ವಿದ್ವಾನ್ ಸುನಾದಕೃಷ್ಣ ಕನ್ಯಾನ ಅಮೈ (ಮೃದಂಗ), ಶಿವಕೀರ್ತನ ಬಿ.ಜಿ. ಮತ್ತು ಮಾನಸ ಎನ್.ಎಸ್. ಪ್ರಾಯೋಜಕತ್ವ ವಹಿಸುವರು.
ಸುಬ್ರಹ್ಮಣ್ಯ ಬಿಳಿನೆಲೆ ಡಾ. ವಿದ್ಯಾಭೂಷಣ ಅಭಿಮಾನಿ ಸಂಘದವರ ಸಹಕರಿಸುವರು. ರಾತ್ರಿ 9ರಿಂದ ಮಹಾಪೂಜೆ, ರಾತ್ರಿ 10 ರಿಂದ ರಾಜಾಂಗಣದಲ್ಲಿ ಶ್ರೀ ದೇವರ ಬಲಿ ನೃತ್ಯೋತ್ಸವ, ಬಟ್ಟಲು ಕಾಣಿಕೆ, ಮಹಾಪ್ರಸಾದ, ಮಹಾ ಮಂತ್ರಾಕ್ಷತೆ, ರಾತ್ರಿ 11 ಕ್ಕೆ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಪುತ್ತೂರು ಎಸ್.ಆರ್.ಕೆ. ಲ್ಯಾಡರ್ ನ ಕೇಶವ ಎ. ಪ್ರಾಯೋಜಕತ್ವ ವಹಿಸುವರು. ಬಿಳಿನೆಲೆ ಕ್ಷೇತ್ರ ಪರಮ ಪವಿತ್ರ ಕ್ಷೇತ್ರ ಎಂದರೆ ತಪ್ಪಲ್ಲ. ಸಾವಿರಾರು ವರ್ಷಗಳ ಹಿಂದೆ ಮುನಿಯೊಬ್ಬರು ತಪಸ್ಸು ಮಾಡಿ ಸಿದ್ಧಿ ಪಡೆದ ಪವಿತ್ರ ಭೂಮಿ. ಎರಡು ಕೈಗಳಲ್ಲಿ ಬೆಣ್ಣೆ ಹಿಡಿದ ನವನೀತ ದಾರಿ ಕೃಷ್ಣನ ಪ್ರತಿಮೆ ಬಹಳ ಅಪರೂಪ. ಗೋಸಂರಕ್ಷಕನಾದ ಗೋಪಾಲಕೃಷ್ಣನ ಈ ಕ್ಷೇತ್ರ ಗೋದುರಿತ ದೋಷ ನಿವಾರಣೆಗೆ ಪ್ರಸಿದ್ಧಿ ಪಡೆದಿದೆ.