ತುಮಕೂರು: ಮದುವೆಯಾಗಿ ಗರ್ಭಿಣಿಯಾದ ನಂತರ ನನ್ನ ಪತಿ ವಂಚಿಸಿದ್ದಾರೆ ಎಂದು ಆರೋಪಿಸಿ ಟಿ. ನರಸೀಪುರ ತಾಲೂಕಿನ ಮಹಿಳೆಯೊಬ್ಬರು ಕುಣಿಗಲ್ ಪೊಲೀಸ್ ಠಾಣೆ ಗೆ ದೂರು ನೀಡಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ತೆರೆದಕುಪ್ಪೆ ಗ್ರಾಮ ಪಂಚಾಯತ್ನ ಪಿಡಿಓ ಸುದರ್ಶನ್ ವಿರುದ್ಧ ದೂರು ನೀಡಿದ್ದು, 2011 ರಲ್ಲಿ ದೇವರಾಯನದುರ್ಗ ಬೆಟ್ಟದಲ್ಲಿ ನನ್ನ ವಿವಾಹವಾಗಿತ್ತು. 2016 ರಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹದ ನೊಂದಣಿಯಾಗಿದೆ. 2021 ರಲ್ಲಿ ಮದುವೆಯಾಗಿರುವ ವಿಚಾರ ನನ್ನ ಪತಿಯ ತಾಯಿ ಮತ್ತು ಸಹೋದರರಿಗೆ ತಿಳಿದಾಗ ಅವರು ಆಕ್ಷೇಪಿಸಿದ್ದಾರೆ. ಬಳಿಕ ಸುದರ್ಶನ್ ಮನೆಗೆ ಬರುವುದನ್ನ ನಿಲ್ಲಿಸಿದ್ದರು ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.