ಸುಳ್ಯ: ಇಲ್ಲಿನ ಮುರುಳ್ಯ ಗ್ರಾಮದ ಅಲೆಕ್ಕಾಡಿಯಲ್ಲಿ ಅನ್ಯಕೋಮಿನ ಯುವಕನೋರ್ವ ಅಸಹ್ಯವಾಗಿ ವರ್ತಿಸಿದ್ದಾಗಿ ಯುವತಿಯೋರ್ವಳು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ ಘಟನೆ ನಡೆದಿದೆ.
ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ನವಾಜ್ (29) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿದು ಬಂದಿದೆ. ಅಲೆಕ್ಕಾಡಿಯಲ್ಲಿ ಬಾಡಿಗೆ ರೂಮ್ ಮಾಡಿಕೊಂಡಿದ್ದ ಕಲ್ಮಡ್ಕದ ಕಜೆ ನವಾಜ್ (29) ಎಂಬಾತ ಅದೇ ಕಟ್ಟಡದಲ್ಲಿ ಬಾಡಿಗೆ ರೂಮ್ ಮಾಡಿಕೊಂಡು ತಾಯಿಯೊಂದಿಗೆ ವಾಸವಿರುವ ಯುವತಿಯ ಜೊತೆ ಕೈಸನ್ನೆ ಮಾಡುವುದು, ಬಟ್ಟೆ ಕಳಚುವುದು, ಮತ್ತು ಬಟ್ಟೆ ಒಗೆಯುವಾಗ ಇಣುಕಿ ನೋಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಯುವತಿ ದೂರು ನೀಡಿದ್ದಳು.