ತುಮಕೂರು: ಪೋನ್ ಪೇ ಮೂಲಕ ಲಂಚ ಕೇಳಿದ ತುಮಕೂರಿನ ಗುಬ್ಬಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅಮಾನತು ಮಾಡಲಾಗಿದೆ. ಗುಬ್ಬಿ ಪೊಲೀಸ್ ಠಾಣೆಯ ಪಿಎಸ್ ಐ ಜ್ಞಾನಮೂರ್ತಿ ಸಸ್ಪೆಂಡ್ ಆದವರಾಗಿದ್ದಾರೆ. ಕಳೆದ ವಾರ ವಿನಾಕಾರಣ ಮ್ಯಾಕ್ಸಿಕ್ಯಾಬ್ ತಡೆದು ಕಿರುಕುಳ ನೀಡಿದ್ದ ಆರೋಪ ಎದುರಿಸುತ್ತಿದ್ದ ಪಿಎಸ್ಐ ಜ್ಞಾನಮೂರ್ತಿ ಕ್ಯಾಬ್ ಚಾಲಕನಿಂದ 7 ಸಾವಿರ ರೂ ಫೋನ್ ಪೇ ಮೂಲಕ ಹಣ ಪಡೆದಿದ್ದರೆನ್ನಲಾಗಿದೆ. ಜೀಪ್ ಚಾಲಕ ಕರಿಯಪ್ಪರ ನಂಬರ್ ಗೆ ಫೋನ್ ಪೇ ಮಾಡಿಸಿಕೊಂಡದ್ದ ಪಿಎಸ್ ಐ ಜ್ಞಾನ ಮೂರ್ತಿ ವಿರುದ್ಧ ದೌರ್ಜನ್ಯ ಮಾಡಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿತ್ತು. ಚಾಲಕರು ಕರಿಯಪ್ಪ ವಿರುದ್ಧ ಪ್ರತಿಘಟನೆ ನಡೆಸಿದ್ದರು. ಈ ಪ್ರಕರಣ ಸಂಬಂಧ ಪಿಎಸ್ಐ ಅಮಾನತು ಮಾಡಿ ತುಮಕೂರು ಎಸ್ ಪಿ ರಾಹುಲ್ ಕುಮಾರ್ ಶಹಾಪುರ್ ಆದೇಶ ನೀಡಿದ್ದಾರೆ.
- +91 73497 60202
- [email protected]
- November 28, 2024 4:03 AM