ಗೋಳಿತೊಟ್ಟು: ಬ್ರಹ್ಮ ಕಮಲ ಎಂಬುವುದು ಭಾರತೀಯ ಹಿಮಾಲಯ ಪ್ರದೇಶಗಳಲ್ಲಿ ಮುಖ್ಯವಾಗಿ ಕಂಡುಬರುವ ಸ್ಥಳೀಯ ಮತ್ತು ಅಪರೂಪದ ಹೂ ಬಿಡುವ ಸಸ್ಯ ಪ್ರಭೇದ. ಈ ಹೂವನ್ನು ‘ಹಿಮಾಲಯನ್ ಹೂವುಗಳ ರಾಜ’ ಎಂದೂ ಕರೆಯುತ್ತಾರೆ. ನಕ್ಷತ್ರದಂತೆ ಕಾಣುವ ಹೂವು ನೋಡಲು ಸುಂದರವಾಗಿದ್ದು ಅಪರೂಪದ್ದಾಗಿದೆ.
ಹೌದು, ಇಂತಹ ಬ್ರಹ್ಮ ಕಮಲ ಹೂವು ಇತ್ತೀಚೆಗೆ ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮದ ನಿವಾಸಿ ಕೆಎಸ್ಆರ್ ಟಿಸಿ ಬಸ್ ಕಂಡೆಕ್ಟರ್ ಕುದ್ಕೋಳಿ ಗೋಪಾಲ ಗೌಡ ಅವರ ಮನೆಯ ಹಿತ್ತಲಲ್ಲಿ ಅರಳಿತು. ಈ ವಿಶೇಷವನ್ನು ಹತ್ತಿರದ ಮನೆಯವರು ಕೂಡ ಬಂದು ವೀಕ್ಷಿಸಿ ಖುಷಿ ಪಟ್ಟರು. ಈ ಫೋಟೋಗಳನ್ನು ನ್ಯೂಸ್ ನಾಟೌಟ್ ತಂಡದೊಂದಿಗೆ ಗೋಪಾಲ ಗೌಡ ಕುಟುಂಬದವರು ಹಂಚಿಕೊಂಡಿದ್ದಾರೆ.
ಏನಿದು ಬ್ರಹ್ಮ ಕಮಲ?
ಬ್ರಹ್ಮಕಮಲ ಎಂದರೆ ‘ಬ್ರಹ್ಮ ದೇವನ ಕಮಲ’ ಎಂದರ್ಥ ಮತ್ತು ಅದಕ್ಕೆ ಅವನದ್ದೇ ಹೆಸರಿಡಲಾಗಿದೆ. ಒಳ್ಳೆಯವರು ಮಾತ್ರ ಹೂವು ಅರಳುವುದನ್ನು ನೋಡಬಹುದು, ಅದನ್ನು ನೋಡಿದವನು ಸುಖ-ಸಂಪತ್ತು ಪಡೆಯುತ್ತಾನೆ ಎಂಬ ನಂಬಿಕೆ ಇದೆ. ಹೂವು ಅರಳಲು 2 ಗಂಟೆ ತೆಗೆದುಕೊಳ್ಳುತ್ತದೆ. ಮಾನ್ಸೂನ್ ಮಧ್ಯದ ತಿಂಗಳಲ್ಲಿ ಹೂವು ಅರಳುತ್ತದೆ.
ಬ್ರಹ್ಮಕಮಲ ಜೀವ ಸಂಜೀವಿನಿ
ಬ್ರಹ್ಮ ಕಮಲ ಯಕೃತ್ತಿಗೆ ಅತ್ಯುತ್ತಮ ಟಾನಿಕ್ ಕೆಮ್ಮು ಮತ್ತು ಶೀತಕ್ಕೆ ಚಿಕಿತ್ಸೆ ನೀಡುವುದರಿಂದ ಹಿಡಿದು ಲೈಂಗಿಕ ಆರೋಗ್ಯವನ್ನು ಉತ್ತೇಜಿಸುವವರೆಗೆ ಬ್ರಹ್ಮ ಕಮಲ ಅನೇಕ ಅದ್ಭುತ ಔಷಧೀಯ ಪ್ರಯೋಜನಗಳನ್ನು ಹೊಂದಿದೆ. ಬ್ರಹ್ಮ ಕಮಲ ಆಕರ್ಷಕವಾಗಿ ಕಾಣಿಸಬಹುದು. ಇದು ತುಂಬಾ ಬಲವಾದ ಮತ್ತು ಕಹಿ ವಾಸನೆ ಹೊಂದಿರುತ್ತದೆ. ಬ್ರಹ್ಮ ಕಮಲದ ಹೂವು ಯಕೃತ್ತಿಗೆ ಅತ್ಯುತ್ತಮ ಟಾನಿಕ್.
ಇದು ಯಕೃತ್ತಿನ ಮೇಲೆ ಫ್ರೀ ರಾಡಿಕಲ್ ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಬ್ರಹ್ಮ ಕಮಲದ ಹೂವಿನಿಂದ ತಯಾರಿಸಿದ ಸೂಪ್ ಪಿತ್ತಜನಕಾಂಗದ ಉರಿಯೂತ ಚಿಕಿತ್ಸೆಗೆ ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿ ರಕ್ತದ ಅಂಶವನ್ನು ಹೆಚ್ಚಿಸುತ್ತದೆ. ಬ್ರಹ್ಮ ಕಮಲ ದೇಹದಲ್ಲಿ ರಕ್ತ ಶುದ್ಧೀಕರಿಸುತ್ತದೆ. ಪ್ಲೇಗ್ ಚಿಕಿತ್ಸೆಗೆ ಉಪಕಾರಿ. ಹಾವಿನ ಕಡಿತಕ್ಕೆ ಚಿಕಿತ್ಸೆ ನೀಡಬಹುದು. ಸಂಧಿವಾತಕ್ಕೆ ಪರಿಹಾರವಾಗಿ ಕಾರ್ಯನಿರ್ವಹಿಸಬಹುದು. ಮಾನಸಿಕ ಆರೋಗ್ಯ ಅಸ್ವಸ್ಥತೆಗೂ ಮದ್ದು. ಹೃದಯ ದೌರ್ಬಲ್ಯಗಳಿಗೆ ಚಿಕಿತ್ಸೆ ನೀಡಲು ಸಹಾಯಕ ಹೀಗೆ ಬ್ರಹ್ಮ ಕಮಲ ಹಲವು ಔಷಧೀಯ ಗುಣಗಳನ್ನು ಹೊಂದಿರುವುದು ವಿಶೇಷವಾಗಿದೆ.