ಕೊಡಗು ಸಂಪಾಜೆ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 17 ರಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ವಿಪತ್ತು ನಿರ್ವಹಣಾ ಘಟಕದ ಸಂಯುಕ್ತ ಆಶ್ರಯದಲ್ಲಿ ಹಣ್ಣಿನ ಗಿಡ ನಾಟಿ ಕಾರ್ಯಕ್ರಮ ಹಾಗೂ ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ಭರತ್, ಸದಸ್ಯರುಗಳಾದ ಕುಮಾರ್ ಚೆದ್ಕಾರ್, ಶ್ರೀಮತಿ ರಮಾದೇವಿ ಬಾಲಚಂದ್ರ ಕಳಗಿ,
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಶ್ರೀ ಪದ್ಮಯ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಾರದ ಹರೀಶ್, ಅರಣ್ಯ ರಕ್ಷಕರಾದ ವಿಜಯೇಂದ್ರ, ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀಧರ್ ಪಡ್ಪು, ಸಂಪಾಜೆ ಶಾಲಾ ಶಿಕ್ಷಕ ವರ್ಗ, ವಿಪತ್ತು ಸ್ವಯಂ ಸೇವಕರಾದ ಹೊನ್ನಪ್ಪ ಪಡ್ಪು, ಚಂದ್ರಶೇಖರ ಎಂ, ಯಶವಂತ ಅಳಿಕೆ, ಉದಯಕುಮಾರ್ ಎ.ಬಿ, ಸುನಿಲ್ ಎ. ಆರ್, ಗೋಪಾಲ ಕಲಾಯಿ, ವಾಣಿ ಜಗದೀಶ್ ಕೆದಂಬಾಡಿ, ಸತ್ಯವತಿ ಕುಂಬಾಡಿ, ಕುಸುಮ ಕನ್ಯಾನ, ಆರತಿ ಕಲಾಯಿ ಪುಷ್ಪಾವತಿ ಬಿ.ಬಿ, ಭಾಗವಹಿಸಿದ್ದರು. ಸಮಾರಂಭದಲ್ಲಿ ವಾಣಿ ಕೆದಂಬಾಡಿ ಪ್ರಾರ್ಥನೆಯಲ್ಲಿ ಮೊದಲ್ಗೊಂಡು ಪುಷ್ಪಾವತಿ ಕೆ.ವಿ, ಸಂಯೋಜಕಿ ಇವರು ಗಣ್ಯರನ್ನು ಸ್ವಾಗತಿಸಿ, ಮೇಲ್ವಿಚಾರಕ ಹರೀಶ್ ಅವರು ನಿರೂಪಿಸಿ, ಆರತಿ ಕಲಾಯಿ ಅವರು ಗಣ್ಯರಿಗೆ ಧನ್ಯವಾದ ಸಮರ್ಪಿಸಿದರು.